ಬೀಜಿಂಗ್:ಚೀನಾವು ನಿರ್ಮಾಣ ಹಂತದಲ್ಲಿರುವ ತನ್ನ ಅಂತರಿಕ್ಷ ನಿಲ್ದಾಣಕ್ಕೆ ಭಾನುವಾರ ಮೊದಲ ‘ಲ್ಯಾಬ್ ಮಾಡ್ಯೂಲ್’ (ಪ್ರಯೋಗಾಲಯವಿರುವ ಕ್ಯಾಬಿನ್) ಕಳುಹಿಸಿದೆ.
ವೆಂಟಿಯಾನ್ ಹೆಸರಿನ ಲ್ಯಾಬ್ ಮಾಡ್ಯೂಲ್ ಹೊತ್ತ ‘ಲಾಂಗ್ ಮಾರ್ಚ್–5ಬಿ ವೈ3’ ರಾಕೆಟ್ ಅನ್ನುದಕ್ಷಿಣ ಚೀನಾದ ಹೈನಾನ್ ದ್ವೀಪದಲ್ಲಿರುವ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (ಸಿಎಂಎಸ್‌ಎ) ಹೇಳಿದೆ.
ಚೀನಾವು ‘ತಿಯಾಂಗೊಂಗ್’ ಹೆಸರಿನ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸಲು ಮುಂದಾಗಿದ್ದು, ಇದು ಈ ವರ್ಷವೇ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕರ್ನಲ್ ಚೆನ್ ಡಾಂಗ್, ಲಿಯು ಯಾಂಗ್ ಮತ್ತು ಕಾಯ್ ಕ್ಸುಝೆ ಅವರು ಈ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
2021ರಲ್ಲಿ ಟಿಯಾನ್ಹೆ ಮಾಡ್ಯೂಲ್ ಅನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಕೆಲವೇ ಗಂಟೆಗಳಲ್ಲಿವೆಂಟಿಯಾನ್ ಮಾಡ್ಯೂಲ್ ಟಿಯಾನ್ಹೆ ಮಾಡ್ಯೂಲ್ ಜೊತೆ ಸಂಧಿಸಲಿದೆ ಎಂದೂಸಿಎಂಎಸ್‌ಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.