ಚೆನ್ನೈ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ಏರೋಸ್ಪೇಸ್ ಎಂಜಿನಿಯರ್ ಡಾ.ಸ್ವಾತಿ ಮೋಹನ್ ಅವರು ಜುಲೈ 28ರಂದು ಸಂಜೆ 7ಕ್ಕೆ ವರ್ಚುಯಲ್ ಸಂವಹನದ ಮೂಲಕ ‘ಡಯಾಸ್ಪೊರಾ ಡಿಪ್ಲೊಮಸಿ’ ಸರಣಿಯಲ್ಲಿ ತಮ್ಮ ಯಶಸ್ವಿ ಯಾನದ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಚೆನ್ನೈನ ಅಮೆರಿಕ ರಾಯಭಾರ ಕಚೇರಿಯುಡಯಾಸ್ಪೊರಾ ಡಿಪ್ಲೊಮಸಿ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
ಭಾರತ ಮೂಲದ ಡಾ.ಸ್ವಾತಿ ಮೋಹನ್, ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ(ಜೆಪಿಎಲ್)ಯಲ್ಲಿ ಗೈಡೆನ್ಸ್, ನ್ಯಾವಿಗೇಷನ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್ ಎಂಜಿನಿಯರಿಂಗ್ ಗ್ರೂಪ್ ಸೂಪರ್ವೈಸರ್ ಆಗಿದ್ದಾರೆ. ಅವರು 2020ರ ಮಂಗಳಯಾನ ಯೋಜನೆಯ ಗೈಡೆನ್ಸ್, ನ್ಯಾವಿಗೇಷನ್ ಮತ್ತು ಕಂಟ್ರೋಲ್ ಆಪರೇಷನ್ಸ್ ಹೊಣೆ ಹೊತ್ತಿದ್ದರು.
ಡಯಾಸ್ಪೊರಾ ಡಿಪ್ಲೊಮಸಿ ಸರಣಿ ಮೂಲಕ ಚೆನ್ನೈನ ಅಮೆರಿಕ ರಾಯಭಾರ ಕಚೇರಿಯು ಭಾರತೀಯ ಮೂಲದ ಅಮೆರಿಕ ಸಾಧಕರ ಪರಿಚಯ ಮಾಡಿಕೊಡಲಿದ್ದು, ಈ ಸಾಧಕರು ತಮ್ಮ ಯಶಸ್ಸಿನ ಯಾನ ಕುರಿತು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.
ಅಮೆರಿಕ-ಭಾರತ ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿ ಭಾರತೀಯ ಮೂಲದವರ ಪಾತ್ರದ ಕುರಿತು ಹೇಳಲಿದ್ದಾರೆ. ಈ ಸರಣಿಯು ಭಾರತೀಯ ಅಮೆರಿಕನ್ ಸಮುದಾಯವು ಅಮೆರಿಕಾದ ವ್ಯಾಪಾರ, ಶಿಕ್ಷಣ, ಆವಿಷ್ಕಾರ, ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ನೀಡಿರುವ ಅಸಾಧಾರಣ ಕೊಡುಗೆಗಳನ್ನು ಕೂಡಾ ಎತ್ತಿ ತೋರಲಿದೆ.
ಚೆನ್ನೈನಲ್ಲಿರುವ ಯುಎಸ್ ಕಾನ್ಸಲ್ ಜನರಲ್ ಜ್ಯುಡಿತ್ ರೇವಿನ್ ಅವರು ಈ ಸರಣಿಗೆ ಚಾಲನೆ ನೀಡಲಿದ್ದು, ‘ನಲವತ್ತು ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಭಾರತ ಮೂಲದವರಾಗಿದ್ದಾರೆ. ಈ ವಲಸಿಗರು ಅಮೆರಿಕ ಮತ್ತು ಭಾರತದ ನಡುವಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯಗಳನ್ನು ಗಟ್ಟಿಗೊಳಿಸು ಚಾಲಕಶಕ್ತಿಯಾಗಿದ್ದಾರೆ. ಭಾರತೀಯ ಅಮೆರಿಕನ್ನರ ಧ್ವನಿಯನ್ನು ನಿಮ್ಮೆಲ್ಲರಿಗೆ ತಲುಪಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದ್ದಾರೆ.
ಡಾ.ಮೋಹನ್, ಭಾರತದ ಯುನೈಟೆಡ್ ನೇಷನ್ಸ್ ಸ್ಪೇಸ್ ಫಾರ್ ವಿಮೆನ್ ನೆಟ್ವರ್ಕ್ ಮಾರ್ಗದರ್ಶಕಿ ದೀಪನಾ ಗಾಂಧಿ ಅವರು ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಬಾಹ್ಯಾಕಾಶ ಆಸಕ್ತರೊಂದಿಗೆ ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಅವರು ಪರ್ಸರ್ವೆರೆನ್ಸ್ ಮಾರ್ಸ್ ರೋವರ್ ಮಿಷನ್, ಭಾರತೀಯ ಮೂಲದ ಕುರಿತು, ಅವರ ಯುಎಸ್‌ನ ಉನ್ನತ ಶಿಕ್ಷಣ ಮತ್ತು ಸ್ಟೆಮ್(ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಅಂಡ್ ಮ್ಯಾಥಮ್ಯಾಟಿಕ್ಸ್)ನಲ್ಲಿ ಅವರ ಪಾತ್ರದ ಕುರಿತಾದ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.
ನೀವು ಈ ವರ್ಚುಯಲ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು: https://statedept.zoomgov.com/webinar/register/WN_Zh6CxJU7QyugRH3gJ9FlEg
ಈ ಕಾರ್ಯಕ್ರಮ ಚೆನ್ನೈನ ಅಮೆರಿಕನ್ ರಾಯಭಾರ ಕಚೇರಿಯ ಫೇಸ್‌ಬುಕ್ ಪುಟದಲ್ಲಿ ಲೈವ್ ಸ್ಟ್ರೀಮ್ ಆಗುತ್ತದೆ ಲಿಂಕ್: https://www.facebook.com/chennai.usconsulate/ ವೀಕ್ಷಕರು ಈ ಕಾರ್ಯಕ್ರಮದ ಅವಧಿಯಲ್ಲಿ ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳನ್ನು ಕೇಳಬಹುದು. ಆಯ್ದ ಪ್ರಶ್ನೆಗಳಿಗೆ ಡಾ.ಮೋಹನ್ ಉತ್ತರಿಸುತ್ತಾರೆ.
ಡಯಾಸ್ಪೋರಾ ಡಿಪ್ಲೊಮಸಿಯ ಎರಡನೆಯ ಕಾರ್ಯಕ್ರಮ ಸರಣಿಯಲ್ಲಿ ಗ್ರಾಮಿ ನಾಮ ನಿರ್ದೇಶಿತ ಭಾರತೀಯ ಅಮೆರಿಕನ್ ಗಾಯಕಿ ಪ್ರಿಯಾ ದರ್ಶಿನಿ, ಆಗಸ್ಟ್ 18ರಂದು ವರ್ಚುಯಲ್ ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ. ಆಗಸ್ಟ್ 19ರಂದು ಪ್ರಿಯಾ ಮತ್ತು ಅವರ ತಂಡವು ಉದಯೋನ್ಮುಖ ಸಂಗೀತಗಾರರಿಗೆ ವರ್ಚುಯಲ್ ಕಾರ್ಯಾಗಾರ ನಡೆಸಲಿದ್ದಾರೆ.
ಡಯಾಸ್ಪೊರಾ ಡಿಪ್ಲೊಮಸಿ ಸರಣಿ ಕುರಿತು: ಸುಂದರ್ ಪಿಚೈ, ಸುನಿತಾ ವಿಲಿಯಮ್ಸ್, ವಿವೇಕ್ ಮೂರ್ತಿ, ಸ್ಪೆಲ್ಲಿಂಗ್ ಬೀ ಗೆಲ್ಲುವುದರಿಂದ ನಮ್ಮ ಅತ್ಯಂತ ದೊಡ್ಡ ಕಂಪನಿಗಳ ನೇತೃತ್ವ ವಹಿಸುವವರೆಗೆ ಫೆಡರಲ್ ಸರ್ಕಾರದಲ್ಲಿ ಧ್ವನಿ ಎತ್ತುವವರೆಗೆ ಭಾರತೀಯ ಅಮೆರಿಕನ್ನರು ಅಪಾರ ಕೊಡುಗೆ ನೀಡುತ್ತಿದ್ದಾರೆ. ಅವರ ಯಶಸ್ಸಿನ ಗುಟ್ಟೇನು? ಈ ಸರಣಿ ಮಾತುಕತೆಯ ಮೂಲಕ ಡಯಾಸ್ಪೊರಾ ಡಿಪ್ಲೊಮಸಿಯು ಅಮೆರಿಕದ ಬಹು ಸಾಂಸ್ಕೃತಿಕ ಸಮಾಜದಲ್ಲಿ ಭಾರತೀಯ ಅಮರಿಕನ್ನರ ಗುರುತಿನ ಮಾಹಿತಿ ನೀಡುತ್ತದೆ. ಮಾನ್ಯತೆ ಮಾಡುತ್ತದೆ ಮತ್ತು ಅವರ ಸಾಧನೆಗಳನ್ನು ಸಂಭ್ರಮಿಸುತ್ತದೆ. ವಿವಿಧ ಕ್ಷೇತ್ರಗಳ ಭಾರತೀಯ ಅಮೆರಿಕನ್ನರು ತಮ್ಮ ವೈಯಕ್ತಿಕ ಮತ್ತು ಸಮಗ್ರ ನೋಟದ ಕುರಿತು ಮಾತನಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.