ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ದೊಂಬಿ ಅಥವಾ ಹಿಂಸಾ ಕೃತ್ಯಗಳ ಮೇಲೆ ನಿಗಾ ಇಡುವ ಡ್ರೋಣ್ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಪೊಲೀಸರು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಕ್ಷಣ ಮಾತ್ರದಲ್ಲಿ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಲು ಸಾಧ್ಯ. ಹಲ್ಲೆ ಮಾಡುತ್ತಿರುವ ಮತ್ತು ಹಲ್ಲೆಗೆ ಒಳಗಾದ ವ್ಯಕ್ತಿಯ ಮೇಲೆ ನಿಗಾ ಇಡುವ ಡ್ರೋಣ್, ಅವರನ್ನು ನಿಖರವಾಗಿ ಗುರುತಿಸುತ್ತದೆ. ಬೇಕೆಂದಾಗ ಅದರಿಂದ ಮಾಹಿತಿ ಪಡೆಯಬಹುದು. ಆ ವ್ಯಕ್ತಿಗಳ ಭಂಗಿಯ ಆಧಾರದಲ್ಲಿ ಯಾವ ರೀತಿಯ ಹಿಂಸೆ ನಡೆಯುತ್ತಿದೆ ಎಂಬುದನ್ನೂ ವಿಶ್ಲೇಷಿಸುತ್ತದೆ.
ಮೊದಲ ಚಿತ್ರ:
ಮಾನವರ ಅಸ್ಥಿ ಪಂಜರಗಳಂತೆ ಕಾಣುವ ಚಿತ್ರಗಳು ಹಿಂಸಾ ಚಟುವಟಿಕೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ವ್ಯಕ್ತಿಗಳ ಕೈ ಮತ್ತು ಕಾಲುಗಳನ್ನು ಹಸಿರು ಬೆಳಕಿನ ಮೂಲಕ ತೋರಿಸಲಾಗಿದೆ. ಇದಕ್ಕಾಗಿ ಸಪೋರ್ಟ್ ವೆಕ್ಟರ್ ಸಾಧನವನ್ನು ಡ್ರೋಣ್‌ನಲ್ಲಿ ಬಳಸಲಾಗಿದೆ.
ಎರಡನೇ ಚಿತ್ರ:
ಮಾನವ ದೇಹದ ಪ್ರಮುಖ 14 ಭಾಗಗಳ ಮೇಲೆ ಬಿಂದುಗಳಂತೆ ಗುರುತಿಸಲಾಗುತ್ತದೆ. ಮುಖ ಭಾಗವನ್ನು ನೇರಳೆ ಬಣ್ಣ, ತೋಳು ಮತ್ತು ಕೈ ಭಾಗವನ್ನು ಕೆಂಪು, ಕಾಲಿನ ಭಾಗವನ್ನು ಹಸಿರು ಬಣ್ಣದಿಂದ ಗುರುತಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.