ADVERTISEMENT

2021ರಲ್ಲಿ ಒಟ್ಟು ನಾಲ್ಕು ಗ್ರಹಣ ಸಂಭವ; ಭಾರತದಲ್ಲಿ ಎರಡು ಗೋಚರ

ಪಿಟಿಐ
Published 27 ಡಿಸೆಂಬರ್ 2020, 15:13 IST
Last Updated 27 ಡಿಸೆಂಬರ್ 2020, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್: 2021ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇದರಲ್ಲಿ ಎರಡು ಮಾತ್ರವೇ ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿವೆ.

ಒಂದು ಸಂಪೂರ್ಣ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ ಎಂದು ಉಜ್ಜಯಿನಿ ಮೂಲದ ಖಗೋಳ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

ಮೊದಲ ಗ್ರಹಣ ಮೇ 26 ರಂದು ಸಂಭವಿಸಲಿದೆ. ಸಿಕ್ಕಿಂ ಹೊರತುಪಡಿಸಿ, ಈಶಾನ್ಯ ರಾಜ್ಯ, ಪಶ್ಚಿಮ ಬಂಗಾಳ, ಒಡಿಶಾದ ಕರಾವಳಿ ಭಾಗಗಳಲ್ಲಿ ಕಾಣಲಿದೆ. ಈ ವೇಳೆ ಭೂಮಿಯು ಬಹುತೇಕ ಚಂದ್ರನನ್ನು ಆವರಿಸುತ್ತದೆ ಎಂದರು.

ADVERTISEMENT

ಜೂನ್ 10 ರಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಸಂದರ್ಭದಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರಲಿದ್ದು, ಸೂರ್ಯನು ಶೇ 94.3 ರಷ್ಟು ಆವರಿಸಿಕೊಳ್ಳುತ್ತಾನೆ ಎಂದಿದ್ದಾರೆ.

ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ‌ಬಹಳ ಕಡಿಮೆ ಅವಧಿಗೆ ನವೆಂಬರ್ 19ರಂದು ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.