ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ‘ಇಸ್ರೊ’ದ ಜಿಸ್ಯಾಟ್–11ಉಪಗ್ರಹ ಡಿಸೆಂಬರ್ 5ರಂದು ಫ್ರೆಂಚ್ ಗಯಾನಾ ಕೇಂದ್ರದಿಂದ ಉಡಾವಣೆಯಾಗಲಿದೆ.
5,854 ಕೆ.ಜಿ. ತೂಕ ಭಾರದ ಜಿಸ್ಯಾಟ್–11 ಇಸ್ರೊ ಇದುವರೆಗೂ ತಯಾರಿಸಿದ ಅತ್ಯಂತ ಭಾರವಾದ ಉಪಗ್ರಹ ಎಂಬ ಹೆಗ್ಗಳಿಕೆ ಹೊಂದಿದೆ.
ಕೊರಿಯಾದ ಮತ್ತೊಂದು ಉಪಗ್ರಹದ ಜತೆ ಜಿಸ್ಯಾಟ್–11 ಹೊತ್ತ ಏರಿಯನ್ –5 ರಾಕೆಟ್ ಬೆಳಗಿನ ಜಾವ ಆಗಸಕ್ಕೆ ಜಿಗಿಯಲಿದೆ. ದೇಶದ ಬ್ರಾಡ್‌ಬ್ಯಾಂಡ್ ಸೇವೆ ಮತ್ತಷ್ಟು ಸುಧಾರಿಸಲಿದೆ. 15 ವರ್ಷಗಳಿಗಿಂತ ಹೆಚ್ಚು ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೊ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.