ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯಚಂದ್ರಯಾನ-2 ಯೋಜನೆಯ ಭಾಗವಾಗಿರುವ ಆರ್ಬಿಟರ್, ಲ್ಯಾಂಡರ್, ರೋವರ್‌ಗಳು ಉಡಾವಣೆಗೆ ಸಜ್ಜಾಗಿವೆ.
ನಗರದ ಮಾರತಹಳ್ಳಿಯಲ್ಲಿರುವ ಇಸ್ರೋ ಕೇಂದ್ರದಲ್ಲಿ ಈ ಮೂರೂ ಸಾಧನಗಳನ್ನು ಬುಧವಾರ ಮಾಧ್ಯಮಗಳಿಗೆ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.
ಜುಲೈ ಮೊದಲ ವಾರ ಚಂದ್ರಯಾನ -2 ಯೋಜನೆಯಂತೆ ಭೂಸ್ಥಿರ ಉಡಾವಣಾ ವಾಹಕವು ಈ ಸಾಧನಗಳನ್ನುಹೊತ್ತು ನಭಕ್ಕೆ ನೆಗೆಯಲಿದೆ. ಸೆಪ್ಟೆಂಬರ್ ವೇಳೆಗೆ ಆರ್ಬಿಟರ್ ಚಂದ್ರನ ಆವರಣ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.