ಯೆಹೂದ್:ಇದೇ ಮೊದಲ ಬಾರಿಗೆ ಖಾಸಗಿಯಾಗಿ ಪ್ರಾಯೋಜಕತ್ವದಲ್ಲಿ ಉಡಾವಣೆಗೊಂಡಿರುವ ಇಸ್ರೇಲ್‌ನ ಗಗನನೌಕೆಯು ಗುರುವಾರ ಚಂದ್ರನ ಕಕ್ಷೆ ಪ್ರವೇಶಿಸಿದ್ದು, ಚಂದ್ರನಲ್ಲಿ ಇಳಿಯುವ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ.
ಭೂಮಿಯಿಂದ 55 ಲಕ್ಷ ಕಿ.ಮೀ. ದೂರ ಚಲಿಸಿರುವ ‘ಬೇರ್‌ಶೀಟ್’ ಗಗನನೌಕೆಯು ಚಂದ್ರನ ಕಕ್ಷೆ ಪ್ರವೇಶಿಸಿದೆ. ಏಪ್ರಿಲ್ 11ರಂದು ಚಂದ್ರನಲ್ಲಿ ಇಳಿಯುವ ಸಾಧ್ಯತೆ ಇದೆ. ಎಂದು ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಇಲ್‌ನ ಸಹಸಂಸ್ಥಾಪಕ ಯೊನಾಥನ್ ವೈನ್‌ಟ್ರಾಬ್ ಹೇಳಿದ್ದಾರೆ.
‘ಚಂದ್ರಯಾನ ಕೈಗೊಳ್ಳುವ ಇಸ್ರೇಲ್‌ನ ಮಹತ್ವಾಕಾಂಕ್ಷೆಯಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಿದೆ’ ಎಂದು ಅವರು ಹೇಳಿದ್ದಾರೆ.
ಚಂದ್ರನ ಗುರುತ್ವಾಕರ್ಷಣ ಬಲವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಈ ಗಗನನೌಕೆಯು, ಅಲ್ಲಿಗೆ ಹೊಂದಿಕೊಳ್ಳಲು ತನ್ನ ವೇಗವನ್ನು ಗಂಟೆಗೆ 8,500 ಕಿ.ಮೀ.ನಿಂದ 7,500 ಕಿ.ಮೀ.ಗೆ ಕಡಿಮೆ ಮಾಡಿಕೊಳ್ಳುವ ಅವಶ್ಯಕತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.