ADVERTISEMENT

ಚಂದ್ರಯಾನ–4, 5ರ ವಿನ್ಯಾಸ ಸಿದ್ಧ: ಇಸ್ರೊ

ಪಿಟಿಐ
Published 20 ಆಗಸ್ಟ್ 2024, 23:44 IST
Last Updated 20 ಆಗಸ್ಟ್ 2024, 23:44 IST
<div class="paragraphs"><p>‘ಚಂದ್ರಯಾನ–3’ರ ಲ್ಯಾಂಡರ್‌ನಲ್ಲಿರುವ ಕ್ಯಾಮೆರಾ (ಎಲ್‌1) ಸೆರೆಹಿಡಿದಿರುವ ಭೂಮಿಯ ಚಿತ್ರ  </p></div>

‘ಚಂದ್ರಯಾನ–3’ರ ಲ್ಯಾಂಡರ್‌ನಲ್ಲಿರುವ ಕ್ಯಾಮೆರಾ (ಎಲ್‌1) ಸೆರೆಹಿಡಿದಿರುವ ಭೂಮಿಯ ಚಿತ್ರ

   

(ಪಿಟಿಐ ಸಂಗ್ರಹ ಚಿತ್ರ)

ನವದೆಹಲಿ: ಚಂದ್ರಯಾನ–4 ಹಾಗೂ ಚಂದ್ರಯಾನ–5 ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿಯನ್ನು ಶೀಘ್ರದಲ್ಲೇ ಕೋರಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಎರಡೂ ಯೋಜನೆಗಳಿಗೆ ಅಗತ್ಯವಿರುವ ಉಪಗ್ರಹಗಳ ವಿನ್ಯಾಸ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 50ರಿಂದ 70 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೊ ಸಜ್ಜಾಗಿದೆ ಎಂದು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ತಿಳಿಸಿದ್ದಾರೆ. 

ಚಂದ್ರಯಾನ–4 ಯೋಜನೆಯನ್ನು 2027–28ರ ಸುಮಾರಿಗೆ ಕಾರ್ಯಗತಗೊಳಿಸುವ ಉದ್ದೇಶ ‘ಇಸ್ರೊ’ಕ್ಕೆ ಇದೆ. ಚಂದ್ರನಲ್ಲಿನ ಮಣ್ಣು ಹಾಗೂ ಕಲ್ಲುಗಳನ್ನು ಭೂಮಿಗೆ ತರುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.