ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಸಂವಹನ ಉದ್ದೇಶದ 'ಜಿಎಸ್‌ಎಟಿ-ಎನ್2' ಉಪಗ್ರಹವನ್ನು ಸ್ಪೇಸ್ ಎಕ್ಸ್‌ನ 'ಫಾಲ್ಕನ್-9' ರಾಕೆಟ್ ನೆರವಿನಿಂದ ಅಮೆರಿಕದ ಕೇಪ್ ಕೆನವೆರಲ್ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಿ ಕಕ್ಷೆಗೆ ಸೇರಿಸಲಾಯಿತು ಎಂದು ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ತಿಳಿಸಿದೆ.
4.7 ಟನ್ ಭಾರದ ಈ 'ಜಿಎಸ್‌ಎಟಿ-ಎನ್2' ಹೈ-ಥ್ರೂಪುಟ್ (ಎಚ್‌ಟಿಎಸ್) ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್‌ಫರ್ ಕಕ್ಷೆಗೆ (ಜಿಟಿಒ) ಯಶಸ್ವಿಯಾಗಿ ಸೇರಿಸಲಾಯಿತು ಎಂದು ಅದು ಹೇಳಿದೆ.
ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು, ಬಳಿಕ ಇಸ್ರೊದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂದು ಎನ್‌ಎಸ್‌ಐಎಲ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
'ಜಿಎಸ್‌ಎಟಿ-ಎನ್2' ಉಪಗ್ರಹವು, ದೇಶದ ಬ್ರಾಡ್‌ಬ್ಯಾಂಡ್ ಸೇವೆ ಮತ್ತು ವಿಮಾನಗಳಲ್ಲಿ ಕನೆಕ್ಟಿವಿಟಿ ಹೆಚ್ಚಿಸಲು ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.