ADVERTISEMENT

ಇಸ್ರೊದಿಂದ ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಯಶಸ್ವಿ ಉಡ್ಡಯನ

ಪಿಟಿಐ
Published 16 ಆಗಸ್ಟ್ 2024, 5:17 IST
Last Updated 16 ಆಗಸ್ಟ್ 2024, 5:17 IST
<div class="paragraphs"><p><strong>SSLV-D3-EOS-08</strong></p></div>

SSLV-D3-EOS-08

   

(ಪಿಟಿಐ ಚಿತ್ರ)

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಉಡ್ಡಯನ ಯಶಸ್ವಿಯಾಗಿದೆ.

ADVERTISEMENT

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಬೆಳಿಗ್ಗೆ 9.17ಕ್ಕೆ ಸರಿಯಾಗಿ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್‌ಎಲ್‌ಎಲ್‌ವಿ-ಡಿ3 ರಾಕೆಟ್ ಮೂಲಕ ಉಡ್ಡಯನ ನಡೆಸಲಾಯಿತು.

ವಿಶೇಷತೆ...

ಇಒಎಸ್-08 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಲಿದ್ದು, ಮೈಕ್ರೊಸ್ಯಾಟಲೈಟ್‌ನ ವಿನ್ಯಾಸ ಹಾಗೂ ಅಭಿವೃದ್ಧಿ ಮತ್ತು ಭವಿಷ್ಯದ ಉಪಗ್ರಹಗಳ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.

ಮೂರು ಪೇಲೊಡ್...

175.5 ಕೆ.ಜಿ ತೂಕದ ಉಪಗ್ರಹವು ಮೂರು ಪೇಲೊಡ್‌ಗಳನ್ನು ಒಳಗೊಂಡಿದೆ.

*Electro Optical Infrared Payload (EOIR),

*Global Navigation Satellite System-*Reflectometry payload (GNSS-R)

*SiC UV Dosimeter

ಉದ್ದೇಶ:

ಉಪಗ್ರಹ ಆಧಾರಿತ ಕಣ್ಗಾವಲು, ನೈಸರ್ಗಿಕ ವಿಪತ್ತಿನ ನಿಗಾ ವಹಿಸುವುದು, ಪರಿಸರ ಮೌಲ್ಯಮಾಪನ, ಬೆಂಕಿ ಅವಘಡ ಪತ್ತೆ, ಜ್ವಾಲಾಮುಖಿ ಚಟುವಟಿಕೆಯ ಮೌಲ್ಯಮಾಪನ, ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತಿನ ನಿಗಾ, ಸಾಗರದ ಮೇಲ್ಮೈಯಲ್ಲಿ ಗಾಳಿಯ ಮೌಲ್ಯಮಾಪನ, ಮಣ್ಣಿನ ತೇವಾಂಶ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮಂಜುಗಡ್ಡೆಯ ಅಧ್ಯಯನ, ಪ್ರವಾಹ ಪತ್ತೆ, ಜಲಮೂಲ ಪತ್ತೆ ಮತ್ತು ವಿಕಿರಣಗಳ ಮೌಲ್ಯಮಾಪನಗಳನ್ನು ಒಳಗೊಂಡಿರಲಿದೆ.

SSLV-D3-EOS-08

ಆಗಸ್ಟ್ 15ರ ಬದಲು 16ರಂದು ಉಡ್ಡಯನ...

ಸುಮಾರು 34 ಮೀಟರ್ ಎತ್ತರವಿರುವ ಕಿರು ಎಸ್‌ಎಸ್‌ಎಲ್‌ವಿ ರಾಕೆಟ್ ಅನ್ನು ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ಬೆಳಿಗ್ಗೆ 9.17ಕ್ಕೆ ಶ್ರೀಹರಿಕೋಟದಿಂದ ಉಡ್ಡಯನ ಮಾಡಲು ಯೋಜಿಸಲಾಗಿತ್ತು. ಬಳಿಕ ಆಗಸ್ಟ್ 16 ಬೆಳಿಗ್ಗೆ 9.17ಕ್ಕೆ ಮುಂದೂಡಲಾಗಿತ್ತು.

ಆರೂವರೆ ತಾಸಿನ ಕೌಂಟ್ ಡೌನ್...

'ಎಸ್‌ಎಸ್‌ಎಲ್‌ವಿ-ಡಿ3-ಇಎಎಸ್-08' ಮಿಷನ್‌ನ ಆರೂವರೆ ಗಂಟೆಗಳ ಕೌಂಟ್‌ಡೌನ್ ಗುರುವಾರ ತಡರಾತ್ರಿ 2.47ಕ್ಕೆ ಆರಂಭವಾಗಿತ್ತು ಎಂದು ಇಸ್ರೊ ತಿಳಿಸಿದೆ.

ಬೆಂಗಳೂರಿನ ಇಸ್ರೊ ಕೇಂದ್ರದಿಂದ ನಿರ್ವಹಣೆ...

ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಬಾಹ್ಯಾಕಾಶ ಕೇಂದ್ರದಿಂದ ನಿರ್ವಹಿಸಲಾಗುತ್ತಿರುವ ಮೂರನೇ ಮಿಷನ್ ಇದಾಗಿದೆ. ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರುವರಿಯಲ್ಲಿ GSLV-F14/INSAT-3DS ನಿರ್ವಹಿಸಲಾಗಿತ್ತು.

ಎಸ್‌ಎಸ್‌ಎಲ್‌ವಿ...

ಎಸ್‌ಎಸ್‌ಎಲ್‌ವಿ ಮೂರು ಹಂತಗಳ, ಕಡಿಮೆ ವೆಚ್ಚದ ಉಡ್ಡಯನ ವಾಹನವಾಗಿದ್ದು, ಸುಮಾರು 500 ಕೆ.ಜಿ ತೂಕದವರೆಗಿನ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.