ADVERTISEMENT

ನೀವೂ ಕೇಳಬಹುದು ಮಂಗಳ ಗ್ರಹದಲ್ಲಿ ಗಾಳಿ ಬೀಸುವ ಸದ್ದು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 11:00 IST
Last Updated 8 ಡಿಸೆಂಬರ್ 2018, 11:00 IST
ಕೃಪೆ: ಎಎಫ್‍ಪಿ
ಕೃಪೆ: ಎಎಫ್‍ಪಿ   

ತಂಪಾ (ಅಮೆರಿಕ): ಮಂಗಳ ಗ್ರಹದಲ್ಲಿ ಗಾಳಿ ಬೀಸುವ ಸದ್ದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಇನ್‍ಸೈಟ್ ಲ್ಯಾಂಡರ್ ಸೆರೆ ಹಿಡಿದೆ.

ಇನ್‌‍ಸೈಟ್ ಲ್ಯಾಂಡರ್‌ನ ಸೋಲಾರ್ ಪ್ಯಾನೆಲ್ ಮೇಲೆ 10-15 mph (ಸೆಕೆಂಡ್‍ಗೆ 5 ರಿಂದ 7 ಮೀಟರ್) ವೇಗದಲ್ಲಿ ಗಾಳಿ ಬೀಸುತ್ತಿರುವ ಸದ್ದು ಸೆರೆಯಾಗಿದೆ. ಅಮೆರಿಕದ ಕಾಲಮಾನ ಸಂಜೆ 5 ಗಂಟೆಗೆ ವಾಯವ್ಯದಿಂದ ಆಗ್ನೇಯಕ್ಕೆ ಬೀಸಿದ ಗಾಳಿಯ ಸದ್ದುಇಲ್ಲಿ ರೆಕಾರ್ಡ್ ಆಗಿದೆ ಎಂದು ಇನ್‍ಸೈಟ್‍ನ ಪ್ರಧಾನ ಸಂಶೋಧಕ ಬ್ರೂಸ್ ಬೆನರ್ಟ್ ಹೇಳಿದ್ದಾರೆ.

ಏರ್ ಪ್ರೆಶರ್ ಸೆನ್ಸರ್, ಸಿಸ್ಮೊಮೀಟರ್ಎಂಬ ಎರಡು ಸೆನ್ಸರ್‌ಗಳು ಗಾಳಿಯ ಕಂಪನವನ್ನು ಸೆರೆ ಹಿಡಿದಿವೆ.

ADVERTISEMENT

ನವೆಂಬರ್ 26ರಂದು ಇನ್‍ಸೈಟ್ ಲ್ಯಾಂಡರ್ ಮಂಗಳ ಗ್ರಹ ತಲುಪಿತ್ತು, ಮಂಗಳ ಗ್ರಹದ ಆಂತರಿಕ ವಾತಾವರಣದ ಬಗ್ಗೆ ಮಾಹಿತಿ ಕಲೆ ಹಾಕಲು ಇದನ್ನು ಬಳಸಲಾಗಿದೆ.ಗ್ರಹದ ಉಷ್ಣತೆಯನ್ನು ಅರಿಯಲು ಇನ್‍ಸೈಟ್ ಮಂಗಳದ ಅಂಗಳದಲ್ಲಿ ಮತ್ತಷ್ಟು ಪರೀಕ್ಷೆ ನಡೆಸಲಿದೆ.ಮಂಗಳದ ಅಂಗಳದಲ್ಲಿನ ಕಂಪನಗಳ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಇನ್‌ಸೈಟ್ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.