ಉಡುಪಿ: ಶನಿವಾರ ಸಂಜೆ 6.55ರ ಹೊತ್ತಿಗೆ ಆಕಾಶದಲ್ಲಿ ಮಂಗಳ ಗ್ರಹಣದ ಕೌತುಕ ಕಾಣಿಸಿತು. ಅಪರೂಪದ ಖಗೋಳ ವಿದ್ಯಮಾನವನ್ನು ಖಗೋಳಾಸಕ್ತರು ದೂರದರ್ಶಕಗಳಲ್ಲಿ ಕಣ್ತುಂಬಿಕೊಂಡರು.
ಸಂಜೆ 5.08ಕ್ಕೆ ಚಂದ್ರನಿಗೆ ಸಮೀಪದಲ್ಲಿ ಕಾಣಿಸಿಕೊಂಡ ಮಂಗಳ ಕೆಲವೇ ಕ್ಷಣಗಳಲ್ಲಿ ಮರೆಯಾಯಿತು. ಚಂದ್ರ ಆವರಿಸಿಕೊಂಡ ಪರಿಣಾಮ ಮಂಗಳ ಗ್ರಹ ಕೆಲಹೊತ್ತು ಕಾಣಲಿಲ್ಲ. ಬಳಿಕ 6.55ರ ಹೊತ್ತಿಗೆ ಮತ್ತೆ ಮಂಗಳ ಗ್ರಹವು ಚಂದ್ರನ ಪ್ರಕಾಶಮಾನವಾದ ಭಾಗದ ಬಳಿ ಬೆಳ್ಳಿಯ ಚುಕ್ಕೆಯಂತೆ ಗೋಚರಿಸಿತು. ಈ ಮೂಲಕ ಚಂದ್ರನ ಅಚ್ಛಾದನೆಯು (ಮಂಗಳ ಗ್ರಹಣ) ಪೂರ್ಣಗೊಂಡಿತು.
ಹಿಂದೆ ಚಂದ್ರನ ಅಚ್ಛಾದನೆಯು ಆಫ್ರಿಕಾ ಹಾಗೂ ಅಮೆರಿಕಾದಲ್ಲಿ ಕಾಣಿಸಿಕೊಂಡಿತ್ತು ಎಂದು ಪೂರ್ಣ ಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.