ADVERTISEMENT

ಮಂಗಳನ ಅಂಗಳದಲ್ಲಿ ರೋವರ್‌ ಇಳಿದ ದೃಶ್ಯ ಬಿಡುಗಡೆ ಮಾಡಿದ ನಾಸಾ

ಏಜೆನ್ಸೀಸ್
Published 23 ಫೆಬ್ರುವರಿ 2021, 5:43 IST
Last Updated 23 ಫೆಬ್ರುವರಿ 2021, 5:43 IST
ಗಗನನೌಕೆಯಿಂದ ಬೇರ್ಪಟ್ಟ ರೋವರ್‌ ಮಂಗಳ ಗ್ರಹದ ಮೇಲ್ಮೈಯಲ್ಲಿ ಇಳಿಯುವ ದೃಶ್ಯಗಳನ್ನು ಹೊಂದಿದ ವಿಡಿಯೊವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ
ಗಗನನೌಕೆಯಿಂದ ಬೇರ್ಪಟ್ಟ ರೋವರ್‌ ಮಂಗಳ ಗ್ರಹದ ಮೇಲ್ಮೈಯಲ್ಲಿ ಇಳಿಯುವ ದೃಶ್ಯಗಳನ್ನು ಹೊಂದಿದ ವಿಡಿಯೊವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ   

ಕೇಪ್‌ ಕ್ಯಾನವೆರಲ್‌: ಮಂಗಳನ ಅಂಗಳದಲ್ಲಿ ಇಳಿದ ತನ್ನ ಗಗನನೌಕೆ ಕಳಿಸಿರುವ ವಿಡಿಯೊವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ.

ಕಿತ್ತಳೆ ಮತ್ತು ಬಿಳಿ ಬಣ್ಣದ ಪ್ಯಾರಾಚೂಟ್‌ ತೆರೆದುಕೊಳ್ಳುತ್ತಿರುವ ಬೆನ್ನಲ್ಲೇ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿರುವ ರಾಕೆಟ್‌ನಿಂದ ರೋವರ್‌ ಮಂಗಳನ ನೆಲದ ಮೇಲೆ ಇಳಿಯುತ್ತದೆ. ಈ ಸಂದರ್ಭದಲ್ಲಿ ಕೆಂಪು ಬಣ್ಣದ ದೂಳು ಆ ಪ್ರದೇಶದಲ್ಲಿ ಆವರಿಸುವ ದೃಶ್ಯಗಳು ಮೂರು ನಿಮಿಷಗಳ ವಿಡಿಯೊದಲ್ಲಿವೆ.

‘ಈ ವಿಡಿಯೊದಲ್ಲಿರುವ ದೃಶ್ಯಗಳನ್ನು ಪ್ರತಿಬಾರಿ ನೋಡಿದಾಗಲೂ ನಾನು ರೋಮಾಂಚನಗೊಳ್ಳುತ್ತೇನೆ’ ಎಂದು ಈ ಮಂಗಳಯಾನ ಕಾರ್ಯಕ್ರಮದಲ್ಲಿ ಕ್ಯಾಮೆರಾ ನಿರ್ವಹಣೆ ತಂಡದ ಮುಖ್ಯಸ್ಥ ಡೇವ್‌ ಗ್ರುಯೆಲ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ದೃಶ್ಯಗಳು ಅದ್ಭುತವಾಗಿವೆ. ಚಿತ್ರಗಳು ನಮ್ಮನ್ನು ಮೂಕವಿಸ್ಮತರನ್ನಾಗಿಸುತ್ತವೆ. ನಾವೇ ಮಂಗಳ ಗ್ರಹದ ಅಂಗಳದಲ್ಲಿ ಚಲಿಸುತ್ತಿದ್ದೇವೆ ಏನೋ ಎಂಬ ಅನುಭೂತಿ ನೀಡುತ್ತವೆ’ ಎಂದು ಈ ತಂಡದ ಸದಸ್ಯರು ಹೇಳಿದ್ದಾರೆ.

‘ನಮ್ಮ ಕನಸು ನನಸಾಗಿರುವುದನ್ನು ಈ ವಿಡಿಯೊ ಹಾಗೂ ಚಿತ್ರಗಳು ಸಾರುತ್ತವೆ’ ಎಂದು ರೋವರ್‌ನ ಲ್ಯಾಂಡಿಂಗ್‌ ಪ್ರಕ್ರಿಯೆಯ ಉಸ್ತುವಾರಿ ಹೊತ್ತ ತಂಡದ ಮುಖ್ಯಸ್ಥ ಅಲ್‌ ಚೆನ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.