ಕೇಪ್ ಕೆನವೆರಾಲ್(ಅಮೆರಿಕ)(ಎಪಿ): ಹಾರುವ ತಟ್ಟೆಗಳ ಕುರಿತ ಅಧ್ಯಯನಕ್ಕೆ ಅತ್ಯಾಧುನಿಕ ಉಪಗ್ರಹಗಳು ಸೇರಿದಂತೆ ಹೊಸ ವೈಜ್ಞಾನಿಕ ತಂತ್ರಗಳ ಅಗತ್ಯವಿದೆ ಎಂದು ನಾಸಾ ಗುರುವಾರ ಹೇಳಿದೆ.
ಹಾರುವ ತಟ್ಟೆಗಳ (ಯುಎಫ್‌ಒ) ಕುರಿತ ವರ್ಷಗಟ್ಟಲೆ ಅಧ್ಯಯನ ನಡೆಸಿದ ನಂತರ ನಾಸಾ, 33 ಪುಟಗಳ ವರದಿಯನ್ನು ಬಿಡುಗಡೆ ಮಾಡಿದೆ.
ಈ ಅಧ್ಯಯನಕ್ಕಾಗಿ ನಾಸಾ, 16 ಸದಸ್ಯರನ್ನು ಒಳಗೊಂಡ ಸ್ವತಂತ್ರ ತಂಡವೊಂದನ್ನು ರಚಿಸಿತ್ತು.
‘ಹಾರುವ ತಟ್ಟೆಗಳ ಕುರಿತ ಗ್ರಹಿಕೆಯನ್ನು ಬದಲಿಸುವ ಅಗತ್ಯವೂ ಇದೆ. ಇವುಗಳ ಕುರಿತಂತೆ ಇರುವ ನಕಾರಾತ್ಮಕ ಗ್ರಹಿಕೆಯು ದತ್ತಾಂಶ ಸಂಗ್ರಹಕ್ಕೆ ದೊಡ್ಡ ಅಡ್ಡಿಯಾಗಲಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.
‘ಯುಎಫ್‌ಒಗಳನ್ನು ಗುರುತಿಸುವುದಕ್ಕೆ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ನೆರವು ಅವಶ್ಯ. ಈ ವಿಚಾರದಲ್ಲಿ ನಾಸಾ ಮಹತ್ವದ ಪಾತ್ರ ವಹಿಸಬಲ್ಲದು’ ಎಂದೂ ತಂಡವು ಹೇಳಿದೆ.
‘ಹಾರುವ ತಟ್ಟೆಗಳ ವಿಚಾರವಾಗಿ ಅನೇಕ ಅಭಿಪ್ರಾಯಗಳಿದ್ದು, ಯಾವುದೇ ವೈಜ್ಞಾನಿಕ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ’ ಎಂದು ನಾಸಾ ಪ್ರತಿಕ್ರಿಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.