ಕೇಪ್ ಕನಾವೆರಲ್: ಗುರುಗ್ರಹದ ಉಪಗ್ರಹವಾದ ಯುರೋಪಾ ಅಧ್ಯಯನಕ್ಕೆ ತೆರಳಲಿರುವ ಬಾಹ್ಯಾಕಾಶ ನೌಕೆಯನ್ನು ಮುಂದಿನ ತಿಂಗಳು ಉಡಾವಣೆ ಮಾಡಲು ನಾಸಾ ಸೋಮವಾರ ಅನುಮೋದನೆ ನೀಡಿದೆ.
ಗುರುಗ್ರಹದಲ್ಲಿ ವಿಕಿರಣಶೀಲತೆ ಹೆಚ್ಚಾಗಿರುತ್ತದೆ. ನೌಕೆಯು ಈ ವಿಕಿರಣಶೀಲತೆ ತಾಳುವಿಕೆಯ ಸಾಮರ್ಥ್ಯ ಹೊಂದಿದೆಯೇ ಎಂದು ಪರಿಶೀಲಿಸಿದ ನಂತರ ನಾಸಾ ಒಪ್ಪಿಗೆ ನೀಡಿದೆ.
ಅಕ್ಟೋಬರ್ 10ರಂದು ಸ್ಪೇಸ್ಎಕ್ಸ್ ಫಾಲ್ಕನ್ ನೌಕೆ ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ.
ಯುರೋಪವು ಜೀವಿಗಳ ವಾಸಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ಈ ಯೋಜನೆ ಕೈಗೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.