ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಇದೇ ಮೊದಲ ಬಾರಿಗೆಎಲೆಕ್ಟ್ರಿಕ್ ಏರ್ ಟ್ಯಾಕ್ಸಿಯನ್ನು ಪರೀಕ್ಷಿಸಲಿದೆ.
ಕ್ಯಾಲಿಫೋರ್ನಿಯಾದ ಕಂಪೆನಿ ಜಾಬಿ ಏವಿಯೇಷನ್ ಆರು ರೋಟರ್‌ಗಳನ್ನು ಹೊಂದಿರುವ ಎಲೆಕ್ಟ್ರಿಕ್ ಹೆಲಿಕಾಪ್ಟರ್ ಅಭಿವೃದ್ಧಿಪಡಿಸಿದೆ. ನಾಸಾ ವಿಜ್ಞಾನಿಗಳು ಇದರ ಪ್ರಾಯೋಗಿಕ ಪರೀಕ್ಷೆ ನಡೆಸಲಿದ್ದಾರೆ.
ಅತ್ಯಂತ ಜನನಿಬಿಡ ನಗರಗಳಲ್ಲೂ ಶಬ್ದ ಮಾಡದೆ ಹಾರಾಡುವಂತಹ ಹೆಲಿಕಾಪ್ಟರ್ ಅನ್ನು ಜಾಬಿ ಏವಿಯೇಷನ್ ವಿನ್ಯಾಸ ಮಾಡಿದೆ. ನಾಸಾ ವಿಜ್ಞಾನಿಗಳು ಇದರ ಶಬ್ದದ ದತ್ತಾಂಶಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲಿದ್ದಾರೆ.
ಈ ಏರ್ ಟ್ಯಾಕ್ಸಿ ಹೆಲಿಕಾಪ್ಟರ್ ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸಲಿದೆ. ಒಮ್ಮೆ ಚಾರ್ಜ್ ಮಾಡಿದರೆ 240 ಕಿ.ಮೀ ಕ್ರಮಿಸಬಲ್ಲದು ಎಂದುಜಾಬಿ ಏವಿಯೇಷನ್ ತಿಳಿಸಿದೆ.
ಸಾಮಾನ್ಯವಾಗಿ ಹೆಲಿಕಾಪ್ಟರ್‌ಗಳು ಹೆಚ್ಚು ಶಬ್ಧವನ್ನು ಹೊರಸೂಸುತ್ತವೆ. ಕಡಿಮೆ ಸದ್ದು ಬರುವಂತೆ ಮಾಡುವುದಕ್ಕಾಗಿ ನಾಸಾ ವಿಜ್ಞಾನಿಗಳು ಇದರ ಅಧ್ಯಯನ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.