ವಾಷಿಂಗ್ಟನ್: ನಾಸಾದ 'ಕ್ಯೂರಿಯಾಸಿಟಿ ರೋವರ್' ಮಂಗಳ ಗ್ರಹದಲ್ಲಿ ಕಲೆಹಾಕಿರುವ ಕಲ್ಲಿನ ಮಾದರಿಯಲ್ಲಿ ಇಂಗಾಲದ ಗುರುತನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಮಂಗಳ ಗ್ರಹದಲ್ಲಿ ಪ್ರಾಚೀನ ಕಾಲದಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಯಾವುದೇ ಕುರುಹು ಸಿಕ್ಕಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಾಚೀನ ಕಾಲದಲ್ಲಿದ್ದ ಬ್ಯಾಕ್ಟಿರಿಯಾ ಅಥವಾ ನೈಸರ್ಗಿಕ ಅಣುಗಳಿಂದ ಸೆಡಿಮೆಂಟರಿ ಬಂಡೆಗಳು ನಿರ್ಮಾಣವಾಗಿರಬಹುದು ಎಂಬುದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯವಿಲ್ಲ ಎಂದು ನಾಸಾ ಹೇಳಿದೆ.
'ಮಂಗಳ ಗ್ರಹದಲ್ಲಿ ಕುತೂಹಲ ಕೆರಳಿಸುವಂತಹ ಸಾಕಷ್ಟು ಆಸಕ್ತಿಕರ ವಿಷಯಗಳನ್ನು ಪತ್ತೆ ಮಾಡುತ್ತಿದ್ದೇವೆ. ಆದರೆ ಜೀವಿಗಳು ಇದ್ದವು ಎಂಬುದನ್ನು ಆಧರಿಸಲು ನಮಗೆ ಸಾಕಷ್ಟು ಪುರಾವೆಗಳ ಅಗತ್ಯವಿದೆ' ಎಂದು 'ಸ್ಯಾಂಪಲ್ ಅನಾಲಿಸಿಸ್ ಅಟ್ ಮಾರ್ಸ್' (ಎಸ್‌ಎಎಮ್)ನ ಪ್ರಧಾನ ಸಂಶೋಧಕ ಪೌಲ್ ಮಹಾಫಿ ತಿಳಿಸಿದ್ದಾರೆ.
'ಪ್ರಾಚೀನ ಕಾಲದಲ್ಲಿ ಜೀವಿಗಳು ಇರದಿದ್ದರೆ ಪತ್ತೆಯಾಗಿರುವ ಇಂಗಾಲದ ಹಿಂದಿನ ರಹಸ್ಯ ಏನು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ' ಎಂದು ಮಹಾಫಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.