ವಾಷಿಂಗ್ಟನ್: ಬಾಲ್ಯದಿಂದ ತಾರುಣ್ಯದ ನಡುವಿನ ಅವಧಿಯಲ್ಲಿ ವ್ಯಕ್ತಿಯೊಬ್ಬ ಹೊಂದಿರುವ ಸಾಮಾಜಿಕ–ಆರ್ಥಿಕ ಸ್ಥಿತಿಗತಿಯು ಆತನ ಮಿದುಳಿನ ಬೆಳವಣಿಗೆಯ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಶಾಲಾಪೂರ್ವ ಅವಧಿಯ ಮಹತ್ವವನ್ನು ಈ ಅಧ್ಯಯನ ಒತ್ತಿಹೇಳಿದೆ. ಮಿದುಳಿನ ಬೆಳವಣಿಗೆ ಹಾಗೂ ಮಗುವಿನ ಸಾಮಾಜಿಕ–ಆರ್ಥಿಕ ಸ್ಥಿತಿಗತಿ ನಡುವಿನ ಸಂಬಂಧ ಈ ಅವಧಿಯಲ್ಲಿ ಮೊದಲಿಗೆ ಏರ್ಪಡುತ್ತದೆ.
‘ಜೆನ್ಯೂರೊಸೈ’ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ. ಅಮೆರಿಕದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯ ಸಂಶೋಧಕರು ಐದರಿಂದ 25 ವರ್ಷದೊಳಗಿನ ವಿವಿಧ ವ್ಯಕ್ತಿಗಳ ಮಿದುಳಿನ ಬೆಳವಣಿಗೆಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ಪೋಷಕರ ಶಿಕ್ಷಣ ಅವರ ಉದ್ಯೋಗ ಹಾಗೂ ವಿಶ್ಲೇಷಣೆಗೆ ಒಳಪಟ್ಟ ವ್ಯಕ್ತಿಯ ಬುದ್ಧಿಮತ್ತೆ ಗುಣಾಂಕಗಳನ್ನು (ಐಕ್ಯೂ) ಅಧ್ಯಯನಕ್ಕೆ ಒಳಪಡಿಸಲಾಯಿತು. ವ್ಯಕ್ತಿಯ ಸಾಮಾಜಿಕ–ಆರ್ಥಿಕ ಸ್ಥಿತಿಗತಿಯು ಆತನ ಮಿದುಳಿನ ಗಾತ್ರ, ಸ್ವರೂಪವನ್ನು ನಿರ್ಧರಿಸುತ್ತದೆ ಎಂಬ ಅಂಶ ತಿಳಿದುಬಂದಿದೆ. ಈ ಸಕಾರಾತ್ಮಕ ಸಂಬಂಧವು ವ್ಯಕ್ತಿಯ ಕಲಿಕೆ, ಭಾಷಾ ಬೆಳವಣಿಗೆ ಮತ್ತು ಭಾವನೆಗಳ ಬೆಳವಣಿಗೆಗೆ ಕಾರಣವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.