ಕೇಪ್ ಕೆನವರಾಲ್: ನಾಲ್ವರು ನಾಗರಿಕರನ್ನು ಹೊತ್ತ ಸ್ಪೇಸ್ಎಕ್ಸ್‌ನ ಮೊದಲ ಖಾಸಗಿ ರಾಕೆಟ್ ಬುಧವಾರ ರಾತ್ರಿ ನಭಕ್ಕೆ ಚಿಮ್ಮಿದೆ. ಇದು ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ದಾಖಲಾದ ದೊಡ್ಡ ಮೈಲಿಗಲ್ಲು.
ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್, ಇಬ್ಬರು ಸ್ಪರ್ಧಾ ವಿಜೇತರು, ಆರೋಗ್ಯ ಸಿಬ್ಬಂದಿ ಮತ್ತು ಶ್ರೀಮಂತ ಪ್ರಾಯೋಜಕರೊಂದಿಗೆ ಬಾಹ್ಯಾಕಾಶ ಪಯಣ ಬೆಳೆಸಿದೆ.
ಇದೇ ಮೊದಲ ಬಾರಿಗೆ ವೃತ್ತಿಪರ ಗಗನಯಾತ್ರಿಗಳಿಲ್ಲದೆ ರಾಕೆಟ್ ನಾಗರಿಕರೊಂದಿಗೆ ಕಕ್ಷೆಗೆ ಉಡಾವಣೆಗೊಂಡಿದೆ. ಈ ಮೂಲಕ ಸ್ಪೇಸ್‌ಎಕ್ಸ್ ತನ್ನ ಮೊದಲ ಪ್ರವಾಸೋದ್ಯಮ ಯೋಜನೆಗೆ ಚಾಲನೆ ನೀಡಿದೆ.
ಡ್ರ್ಯಾಗನ್ ಕ್ಯಾಪ್ಯ್ಸೂಲ್‌ನಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಬಾಹ್ಯಾಕಾಶ ನಿಲ್ದಾಣಕ್ಕಿಂತ 160 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಮೂರು ದಿನಗಳ ಪ್ರಪಂಚವನ್ನು ಸುತ್ತಲಿದ್ದಾರೆ. ಬಳಿಕಫ್ಲಾರಿಡಾ ಕರಾವಳಿಯನ್ನು ತಲುಪಲಿದ್ದಾರೆ.
ಈ ಮಹತ್ತರ ಯೋಜನೆಯು ವಿಶ್ವದಾದ್ಯಂತ ಹೆಚ್ಚಿನ ಆಸಕ್ತಿಯನ್ನು ಕೆರಳಿಸಿದ್ದು, ಭವಿಷ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಗಗನಯಾತ್ರಿಗಳಿಗಿಂತ ಸಾಮಾನ್ಯ ನಾಗರಿಕರೂ ಬಾಹ್ಯಾಕಾಶಯಾನದ ಕನಸನ್ನು ನನಸುಗೊಳಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.