ವಾಷಿಂಗ್ಟನ್: ಮಂಗಳ ಗ್ರಹದಲ್ಲಿ ‘ಕ್ಯೂರಿಯಾಸಿಟಿ ರೋವರ್’ ಗುರುತಿಸಿರುವ ಮೊನಚು ಆಕೃತಿಯ ಚಿತ್ರಗಳನ್ನು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದೆ.
ನಾಸಾದ ‘ಸಿಇಟಿಐ ಇನ್ಸ್‌ಟಿಟ್ಯೂಟ್’ ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದೆ. ‘ಮೊನಚು ಆಕೃತಿಗಳು ಬಂಡೆಗಲ್ಲುಗಳ ನಡುವಿನ ಟೊಳ್ಳಾದ ಭಾಗದಲ್ಲಿ ತುಂಬಿಕೊಂಡ ಸಿಮೆಂಟ್‌ನಂಥ ಪದರಗಳಾಗಿವೆ. ಮೃದುವಾದ ಬಂಡೆಗಳು ಸವೆದು ಹೋದ ಬಳಿಕವು ಸಿಮೆಂಟ್‌ನಂಥ ಈ ರಚನೆಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ಅದು ತಿಳಿಸಿದೆ.
ಮಂಗಳನಲ್ಲಿನ ದೊಡ್ಡ ಕುಳಿ ‘ಗೇಲ್ ಕ್ರೇಟರ್’ನಲ್ಲಿ ಈ ಆಕೃತಿ ಪತ್ತೆಯಾಗಿದೆ ಎಂದು ‘ಸಿಇಟಿಐ ಇನ್ಸ್‌ಟಿಟ್ಯೂಟ್’ ಹೇಳಿದೆ.
ನಾಸಾ ಮಂಗಳನಲ್ಲಿಗೆ ಕಳುಹಿಸಿರುವ ‘ಕ್ಯೂರಿಯಾಸಿಟಿ ರೋವರ್’ ‘ಗೇಲ್ ಕ್ರೇಟರ್’ನ ಅನ್ವೇಷಣೆಯಲ್ಲಿ ತೊಡಗಿದೆ.
ಇನ್ನು ‘ಸಿಇಟಿಐ ಇನ್ಸ್‌ಟಿಟ್ಯೂಟ್’ ಎಂಬುದು ಅಂತರಿಕ್ಷದಲ್ಲಿ ಇರಬಹುದಾದ ಜೀವಿಗಳ ಅನ್ವೇಷಣೆಗೆಂದು ನಾಸಾ ಆರಂಭಿಸಿರುವ ಕಾರ್ಯ ಯೋಜನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.