ADVERTISEMENT

ಅತಿಪ್ರಖರ ಜ್ವಾಲೆ ಹೊಮ್ಮಿಸಿದ ಸೂರ್ಯ: ಅಟ್ಲಾಂಟಿಕ್‌ ರೇಡಿಯೊ ಜಾಲಕ್ಕೆ ಸಮಸ್ಯೆ

ಏಜೆನ್ಸೀಸ್
Published 5 ಜುಲೈ 2021, 10:46 IST
Last Updated 5 ಜುಲೈ 2021, 10:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜುಲೈ 3ರಂದು ಸೂರ್ಯನಿಂದ ಹೊರಟ ಅತಿ ಪ್ರಖರ ಜ್ವಾಲೆಯೊಂದು ಅಟ್ಲಾಂಟಿಕ್‌ನಲ್ಲಿ ರೇಡಿಯೊ ಜಾಲಕ್ಕೆ ಸಮಸ್ಯೆ ತಂದೊಡ್ಡಿದೆ.

2017ರ ಬಳಿಕ ಇಷ್ಟೊಂದು ಮಟ್ಟದ ಪ್ರಖರ ಜ್ವಾಲೆ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ ಎಂದು ‘ಸ್ಪೇಸ್ ವೆದರ್ ಪ್ರಿಡಿಕ್ಷನ್ ಸೆಂಟರ್’ ಹೇಳಿದೆ.

ಸ್ಪೇಸ್‌ವೆದರ್ಡಾಟ್‌ ಕಾಂ ನೀಡಿರುವ ಮಾಹಿತಿಯಂತೆ, ಹೊಸ ಸೌರಪಥದ ಆರಂಭವನ್ನು ಸೂಚಿಸುವ ಸಲುವಾಗಿ ಸೂರ್ಯನಿಂದ ಪ್ರಖರ ಜ್ವಾಲೆ ಹೊರಹೊಮ್ಮಿದೆ ಎನ್ನಲಾಗಿದೆ.

ADVERTISEMENT

ಅಟ್ಲಾಂಟಿಕ್ ಸಾಗರದಲ್ಲಿ ಅಳವಡಿಸಲಾಗಿರುವ ರೇಡಿಯೊ ವ್ಯವಸ್ಥೆಗೆ ಸೂರ್ಯನ ಪ್ರಖರ ಜ್ವಾಲೆಯಿಂದ ತೊಂದರೆ ಎದುರಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.