ADVERTISEMENT

ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2024, 2:04 IST
Last Updated 1 ಜನವರಿ 2024, 2:04 IST
<div class="paragraphs"><p>ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ</p></div>

ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ

   

X/@isro

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹಾತ್ಮಕಾಂಕ್ಷೆಯ ‘ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹ’ (ಎಕ್ಸ್‌ಪೊಸ್ಯಾಟ್) ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

ADVERTISEMENT

ಎಕ್ಸ್‌ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯುವ ಉದ್ದೇಶದಿಂದ ಈ ಯೋಜನೆಯನ್ನು ಇಸ್ರೋ ಪ್ರಾರಂಭಿಸಿದೆ.

ಶ್ರೀಹರಿಕೋಟದ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ(PSLV-C58 XPoSa) ವಾಹಕವು ಬೆಳಿಗ್ಗೆ 9:10ರ ವೇಳೆಗೆ ನಭಕ್ಕೆ ಚಿಮ್ಮಲಿದೆ.

2023ರಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಪದಾರ್ಪಣೆಯ ಬಳಿಕ ಹೊಸ ವರ್ಷ 2024ರಲ್ಲಿ ಹೆಚ್ಚಿನ ಸವಾಲುಗಳ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಇಸ್ರೊ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.