1. ಧರೆಯ ಒಂದು ಪ್ರಧಾನ ಜೀವ ಆವಾರವಾದ ಹುಲ್ಲು ಬಯಲಿನ ದೃಶ್ಯವೊಂದು ಚಿತ್ರ-1ರಲ್ಲಿದೆ. ಬೇರೆ ಬೇರೆ ಭೂ ಖಂಡಗಳಲ್ಲಿ ಬೇರೆ ಬೇರೆ ವಿಧಗಳ ಹುಲ್ಲು ಬಯಲುಗಳಿರುವುದು ನಿಮಗೂ ಗೊತ್ತಲ್ಲ? ಇಲ್ಲಿ ಪಟ್ಟಿ ಮಾಡಿರುವ ‘ಭೂಖಂಡ - ಹುಲ್ಲು ಬಯಲು’ ಸರಿಹೊಂದಿಸಿ :
1. ಉತ್ತರ ಅಮೆರಿಕ ಅ. ಸವನ್ನಾ
2. ದಕ್ಷಿಣ ಅಮೆರಿಕ ಬ. ಸ್ಟೆಪ್ಸ್
3. ಆಫ್ರಿಕ ಕ. ಪಾಂಪಾಸ್
4. ಯೂರೋಪ್ ಡ. ಪ್ರೇರೀ
2. ಚಿತ್ರ-2ರಲ್ಲಿರುವ ‘ಚಿಪ್ಪಿನ ಜೀವಿ’ (ಕ್ರಸ್ಟೇಶಿಯನ್) ಅನ್ನು ಗಮನಿಸಿ. ಈ ಕೆಳಗೆ ಹೆಸರಿಸಿರುವ ಜೀವಿಗಳಲ್ಲಿ ಯಾವುದು ಚಿಪ್ಪಿನ ಜೀವಿಗಳ ಗುಂಪಿಗೆ ಸೇರಿಲ್ಲ? ಏಕೆ?
ಅ. ಏಡಿ
ಬ. ಆಮೆ
ಕ. ಲಾಬ್ ಸ್ಟರ್
ಡ. ಕ್ರಿಲ್
ಇ. ಶ್ರಿಂಪ್
3. ರತ್ನ ಮಣಿಗಳ ಸಂಗ್ರಹವೊಂದನ್ನು ಚಿತ್ರ-3ರಲ್ಲಿದೆ. ನೈಸರ್ಗಿಕ ರತ್ನಮಣಿಗಳಿಗೆ ವಿಪರೀತ ಬೆಲೆ. ಅದಕ್ಕೆ ಕಾರಣವಾಗಿರುವ ರತ್ನಗಳ ಅತ್ಯಂತ ಮುಖ್ಯ ಗುಣ ಏನು?
ಅ. ಅದ್ಭುತ ಹೊಳಪು
ಬ. ಸ್ಫಟಿಕ ರೂಪ
ಕ. ಆಕರ್ಷಕ ಬಣ್ಣ
ಡ. ಅತ್ಯಂತ ವಿರಳ ಲಭ್ಯತೆ
ಇ. ಗಟ್ಟಿತನ
ಈ. ಆಭರಣ ಯೋಗ್ಯ ಗುಣ
4. ಇತಿಹಾಸ ಪ್ರಸಿದ್ಧ ‘ಜ಼ಾರ್’ ದೊರೆಗಳ ನಿವಾಸವೊಂದರ ದೃಶ್ಯ ಚಿತ್ರ-4ರಲ್ಲಿದೆ. ಇದನ್ನು ಈಗಿನ ಯಾವ ರಾಷ್ಟ್ರದಲ್ಲಿ ನೇರ ನೋಡಬಹುದು?
ಅ. ಇಂಗ್ಲೆಂಡ್
ಬ. ಜರ್ಮನಿ
ಕ. ಫ್ರಾನ್ಸ್
ಡ. ರಷ್ಯಾ
5. ನಿಸರ್ಗದ ಅತ್ಯದ್ಭುತ ವಿದ್ಯಮಾನಗಳಲ್ಲೊಂದಾದ ಬಳ್ಳಿ ಮಿಂಚಿನ ದೃಶ್ಯವೊಂದು ಚಿತ್ರ-5ರಲ್ಲಿದೆ. ಮಿಂಚುಗಳ ಬಗೆಗಿನ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ- ಯೋಚಿಸಿ ತೀರ್ಮಾನಿಸಿ:
ಅ. ಮಿಂಚು ಒಂದು ಬಗೆಯ ವಿದ್ಯುತ್ಕಾಂತೀಯ ವಿದ್ಯಮಾನ
ಬ. ಎಲ್ಲ ಮಿಂಚುಗಳೂ ಮೋಡಗಳಿಂದ ನೆಲಕ್ಕೇ ಪ್ರವಹಿಸುತ್ತವೆ
ಕ. ಮಿಂಚು ಮಿಂಚುವ ವೇಗ ಸುಮಾರು ಬೆಳಕಿನ ವೇಗದ ಅರ್ಧದಷ್ಟಕ್ಕೆ ಸಮ
ಡ. ಪ್ರತಿ ಮಿಂಚಿನ ಜೊತೆಗೂ ಗುಡುಗು ಖಂಡಿತ
ಇ. ಮಿಂಚಿಗೆ ಕಾರಣವಾಗುವ ವಿದ್ಯುತ್ ನ ವಿಧ ‘ಸ್ಥಾಯೀ ವಿದ್ಯುತ್’
ಈ. ಮಿಂಚುಗಳು ಕಾಡು ಕಿಚ್ಚುಗಳಿಗೂ ಕಾರಣವಾಗುತ್ತವೆ
6. ವಿಶ್ವದಾಖಲೆಯ ಗಾತ್ರದ - ತೂಕದ ಬಂಗಾರದ ನಾಣ್ಯವೊಂದು ಚಿತ್ರ-6ರಲ್ಲಿದೆ. ಈ ವಿಸ್ಮಯಕರ ನಾಣ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಈ ಎರಡು ಪ್ರಶ್ನೆಗಳಿಗೆ ಉತ್ತರಿಸಿ:
ಅ. ಇದು ಯಾವ ರಾಷ್ಟ್ರ ಟಂಕಿಸಿದ ನಾಣ್ಯ?
ಬ. ಈ ನಾಣ್ಯದ ತೂಕ ಎಷ್ಟು?
7. ಹವಳ ಲೋಕಗಳಲ್ಲಿನ ಹಲವಾರು ಅತ್ಯಾಕರ್ಷಕ ಮತ್ಸ್ಯ ವಿಧಗಳಲ್ಲೊಂದು ಚಿತ್ರ-7ರಲ್ಲಿದೆ. ಈ ಪ್ರಸಿದ್ಧ ಮತ್ಸ್ಯ ವಿಧದ ಹೆಸರು ಗೊತ್ತೇ?
ಅ. ವಿದೂಷಕ ಮೀನು
ಬ. ಸಿಹಿ ತುಟಿ ಮೀನು
ಕ. ಜೀಬ್ರಾ ಮೀನು
ಡ. ಚಿಟ್ಟೆ ಮೀನು
8. ನಮ್ಮ ಸೂರ್ಯನ ಒಂದು ಚಿತ್ರ ಇಲ್ಲಿದೆ (ಚಿತ್ರ-8). ಸೂರ್ಯನ ವಾತಾವರಣದ ಮೂರು ವಿಶಿಷ್ಟ ಪದರಗಳು ಈ ಪಟ್ಟಿಯಲ್ಲಿ ಯಾವುವು?
ಅ. ತೇಜೋಮಂಡಲ (ಫೋಟೊ ಸ್ಫಿಯರ್ )
ಬ. ತಾಪ ಮಂಡಲ ( ಥರ್ಮೋ ಸ್ಫಿಯರ್ )
ಕ. ವರ್ಣಮಂಡಲ ( ಕ್ರೋಮೋ ಸ್ಫಿಯರ್ )
ಡ. ಸ್ತರ ಮಂಡಲ ( ಸ್ಟ್ರಾಟೋ ಸ್ಫಿಯರ್ )
ಇ. ಕರೋನಾ
9. ಪುರಾತನ ಕಾಲದ ವಿಶ್ವ ವಿಖ್ಯಾತ ದೇವಾಲಯಗಳಾದ ಪಗೋಡಾಗಳ ಒಂದು ದೃಶ್ಯ ಚಿತ್ರ-9ರಲ್ಲಿದೆ :
ಅ. ಈ ದೇವಾಲಯಗಳು ಯಾವ ಧರ್ಮಕ್ಕೆ ಸಂಬಂಧಿಸಿವೆ?
ಬ. ಪಗೋಡಾಗಳ ನಾಡು ಎಂದೇ ಪ್ರಸಿದ್ಧವಾಗಿರುವ ರಾಷ್ಟ್ರ ಯಾವುದು?
10. ವಿಶ್ವವಿಖ್ಯಾತ ಗೊರಸಿನ ಪ್ರಾಣಿ ಯಾಕ್ ಚಿತ್ರ-10ರಲ್ಲಿದೆ. ಭಾರತದ ಯಾವ ಪ್ರದೇಶದಲ್ಲಿ ಈ ಪ್ರಾಣಿಗಳನ್ನು ಕಾಣಬಹುದು?
ಅ. ಪಶ್ಚಿಮ ಘಟ್ಟ ಪ್ರದೇಶ
ಬ. ಥಾರ್ ಮರುಭೂಮಿ
ಕ. ಹಿಮಾಲಯನ್ ಪ್ರದೇಶ
ಡ. ಈಶಾನ್ಯ ಗುಡ್ಡಗಾಡು ಪ್ರದೇಶ
11. ಕೆರೆ, ನದಿ, ಸರೋವರಗಳಲ್ಲಿ ನೀರಿಗೆ ಧುಮುಕಿ, ನೀರಲ್ಲಿ ಮುಳುಗಿ ಮೀನು ಹಿಡಿವ ನಿಷ್ಣಾತ ಮೀನುಗಾರ ಹಕ್ಕಿ ಕಿಂಗ್ ಫಿಶರ್ ಚಿತ್ರ-11ರಲ್ಲಿದೆ. ಹೀಗೆಯೇ ಸಾಗರಗಳಲ್ಲಿ ಮೀನು ಹಿಡಿವ ಹಕ್ಕಿಗಳು ಈ ಪಟ್ಟಿಯಲ್ಲಿ ಯಾವುವು?
ಅ. ಆಸ್ಪ್ರೇ
ಬ. ರಣಹದ್ದು
ಕ. ಗನೆಟ್
ಡ. ಪಫಿನ್
ಇ. ಆಲ್ಬಟ್ರಾಸ್
ಈ. ಈಗ್ರೆಟ್
12. ಅತ್ಯಂತ ಪರಿಚಿತವಾದ, ಪ್ರಸ್ತುತ ಬಳಕೆಯಲ್ಲೂ ಇರುವ ನಾಲ್ಕು ಬಗೆಗಳ ವಿದ್ಯುತ್ ಬಲ್ಬ್‌ಗಳು ಚಿತ್ರ-12ರಲ್ಲಿವೆ:
ಅ. ಈ ನಾಲ್ಕೂ ವಿಧ ಬಲ್ಬ್‌ಗಳು ಯಾವುವು?
ಬ. ಇವುಗಳಲ್ಲಿ ಯಾವುದು ಗರಿಷ್ಠ ಅಸಮರ್ಥ?
ಕ. ಇವುಗಳಲ್ಲಿ ಯಾವ ವಿಧ ಗರಿಷ್ಠ ಸಮರ್ಥ?
ಡ. ಇವುಗಳಲ್ಲಿ ಪಾದರಸ ಇರುವ ಬಲ್ಬ್ ಯಾವುದು?
13. ಹೋಲಿಕೆ ಒದಗಿಸಿ:
ಅ. ಬುಧ ಒಂದು ಗ್ರಹ; ಪ್ಲೂಟೋ .......
ಬ. ಗೋಧಿ ಒಂದು ಆಹಾರ ಧಾನ್ಯ; ತೊಗರಿ .......
ಕ. ರೆಡ್ ಉಡ್ ಒಂದು ವೃಕ್ಷ; ಸೆಗ್ವಾರೋ .......
ಡ. ದುಂಬಿ ಒಂದು ಕೀಟ; ಅಷ್ಟ ಪದಿ .......
ಇ. ಸಿರಿಯಸ್ ಒಂದು ನಕ್ಷತ್ರ; ಮಹಾ ವ್ಯಾಧ .......
ಈ. ಗಂಡಕೀ ಒಂದು ನದಿ; ಚಿಲ್ಕಾ.......
ಉ. ಅನ್ನಪೂರ್ಣಾ ಹಿಮಾಲಯದ ಒಂದು ಶಿಖರ; ಅಕೋಂಕಾಗುವಾ.......
ಉತ್ತರಗಳು
1. 1-ಡ ; 2-ಕ ; 3-ಅ ; 4-ಬ
2. ಬ - ಆಮೆ (ಅದು ಸರೀಸೃಪ)
3. ಡ - ಅತ್ಯಂತ ವಿರಳ ಲಭ್ಯತೆ
4. ಡ - ರಷ್ಯಾ
5. ಅ ಮತ್ತು ಬ ತಪ್ಪು ಹೇಳಿಕೆಗಳು
6. ಅ - ಆಸ್ಟ್ರೇಲಿಯಾ; ಬ - ಒಂದು ಟನ್!
7. ಬ - ಸಿಹಿ ತುಟಿ ಮೀನು
8. ಅ, ಕ ಮತ್ತು ಇ
9. ಅ. ಬೌದ್ಧ ಧರ್ಮ; ಬ - ಮ್ಯಾನ್ಮಾರ್ (ಬರ್ಮಾ)
10. ಕ - ಹಿಮಾಲಯ ಪ್ರದೇಶ
11. ಅ, ಕ, ಡ ಮತ್ತು ಇ
12. ಅ. ಎಡದಿಂದ ಬಲಕ್ಕೆ ಕ್ರಮವಾಗಿ : ತಾಪ ದೀಪ್ತಿಯ ಬಲ್ಬ್ , ಹ್ಯಾಲೋಜನ್ ಬಲ್ಬ್ , ಸಿ.ಎಫ್.ಎಲ್. ಮತ್ತು ಎಲ್.ಇ.ಡಿ. ಬಲ್ಬ್
ಬ. ತಾಪ ದೀಪ್ತಿಯ ಬಲ್ಬ್
ಕ. ಎಲ್.ಇ.ಡಿ. ಬಲ್ಬ್
ಡ. ಸಿ.ಎಫ್.ಎಲ್.
13. ಅ. ಕುಬ್ಜ ಗ್ರಹ; ಬ. ಬೇಳೆ ಕಾಳು; ಕ. ಕಳ್ಳಿ ಗಿಡ
ಡ. ಮೃದ್ವಂಗಿ; ಇ. ನಕ್ಷತ್ರ ಪುಂಜ; ಈ. ಸರೋವರ; ಉ. ಆಂಡಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.