ADVERTISEMENT

ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೊದಲ್ಲಿನ ಅಸಲಿ ಯುವತಿ ಪ್ರತಿಕ್ರಿಯೆ

ಭಾರತೀಯ ಮೂಲದ ಬ್ರಿಟಿಷ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಝಾರಾ ಪಟೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2023, 10:39 IST
Last Updated 7 ನವೆಂಬರ್ 2023, 10:39 IST
<div class="paragraphs"><p>ನಟಿ ರಶ್ಮಿಕಾ ಮಂದಣ್ಣ, ಝಾರಾ ಪಟೇಲ್ (ಬಲಗಡೆಯ ಎರಡು ಚಿತ್ರಗಳಲ್ಲಿ ಇರುವವರು)</p></div>

ನಟಿ ರಶ್ಮಿಕಾ ಮಂದಣ್ಣ, ಝಾರಾ ಪಟೇಲ್ (ಬಲಗಡೆಯ ಎರಡು ಚಿತ್ರಗಳಲ್ಲಿ ಇರುವವರು)

   

Zaara Patel

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊಕ್ಕೆ ಸಂಬಂಧಪಟ್ಟಂತೆ ಆ ವಿಡಿಯೊದಲ್ಲಿರುವ ನಿಜವಾದ ಯುವತಿ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಲಿಫ್ಟ್‌ನಲ್ಲಿ ಝಾರಾ ಪಟೇಲ್ ಎಂಬ ಯುವತಿ ಪ್ರವೇಶ ಮಾಡುತ್ತಿರುವ ವಿಡಿಯೊ ಇಟ್ಟುಕೊಂಡು ಯಾರೊ ಕಿಡಿಗೇಡಿಗಳು, ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ವಿಡಿಯೊ ಮಾಡಿ ಹರಿಬಿಟ್ಟಿದ್ದರು.

ಇದೊಂದು ಡೀಪ್‌ಫೇಕ್ ವಿಡಿಯೊ ಆಗಿದ್ದು ಹೊರದೇಶದಲ್ಲಿರುವ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಝಾರಾ ಪಟೇಲ್ ಎನ್ನುವ ಯುವತಿಗೆ ಸಂಬಂಧಿಸಿದ್ದು ಎಂದು ಬಹಿರಂಗವಾಗಿದೆ.

ತುಂಬಾ ಭಯ ಆಗುತ್ತಿದೆ

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಬಗ್ಗೆ ಆಘಾತ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿರುವ ಝಾರಾ ಪಟೇಲ್ ಅವರು, ‘ವಿಡಿಯೊ ನೋಡಿ ನನ್ನ ಮನಸ್ಸು ತೀವ್ರ ಆಘಾತಗೊಂಡಿದೆ’ ಎಂದಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಭವಿಷ್ಯದ ಬಗೆಗಿನ ಚಿಂತೆಯನ್ನು ಈ ವಿಡಿಯೊ ಹುಟ್ಟುಹಾಕಿದೆ. ಭವಿಷ್ಯ ನೋಡಿದರೆ ತುಂಬಾ ಭಯವಾಗುತ್ತಿದೆ’ ಎಂದಿದ್ದಾರೆ.

‘ನನ್ನ ವಿಡಿಯೊಕ್ಕೆ ಭಾರತದ ಜನಪ್ರಿಯ ನಟಿಯೊಬ್ಬರ ಮುಖವನ್ನು ಡೀಪ್‌ಫೇಕ್ ಮಾಡಿ ವಿಡಿಯೊ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ಮಾಡಿರುವುದರಲ್ಲಿ ನನ್ನ ಪಾತ್ರವಿಲ್ಲ. ಇಂಟರ್‌ನೆಟ್‌ನಲ್ಲಿರುವುದೆಲ್ಲ ನಿಜವಲ್ಲ. ಅನುಮಾನ ಬರುವ ವಿಷಯಗಳನ್ನು ದಯವಿಟ್ಟು ಫ್ಯಾಕ್ಟ್ ಚೆಕ್‌ಗೆ ಒಳಪಡಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಝಾರಾ ಪಟೇಲ್ ಅವರು ಲಂಡನ್‌ನಲ್ಲಿ ಇರುವ ಒಬ್ಬ ಬ್ರಿಟಿಷ್ ಇಂಡಿಯನ್ ಇನ್‌ಫ್ಲುಯೆನ್ಸರ್ ಆಗಿದ್ದು ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 4.5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳು ಇದ್ದಾರೆ.

ರಶ್ಮಿಕಾ ಕಿಡಿ

ಈ ಬಗ್ಗೆ ರಶ್ಮಿಕಾ ಮಂದಣ್ಣ ಕೂಡ ತೀವ್ರ ಅಸಮಾಧಾನ ಹಾಗೂ ಆಘಾತ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ರೀತಿಯ ವಿಡಿಯೊದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು X ಹಾಗೂ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇದನ್ನು ನೋಡಿದರೆ ಗೊತ್ತಾಗುತ್ತದೆ. ಈ ವಿಚಾರ ನಮ್ಮಲ್ಲಿ ಪ್ರತಿಯೊಬ್ಬರಿಗೂ ಭಯ ತರಿಸಿದೆ ಎಂದಿದ್ದಾರೆ.

ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇದು ಸಂಭವಿಸಿದ್ದರೇ ನಾನು ಇದನ್ನು ಹೇಗೆ ನಿಭಾಯಿಸಬಹುದುದಿತ್ತು ಎಂಬುದನ್ನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.