ಸಿಡ್ನಿ: ಮಕ್ಕಳ ಮೇಲಿನ ಶೋಷಣೆ, ಲೈಂಗಿಕ ದೌರ್ಜನ್ಯ, ಹಲ್ಲೆ, ಹಾಗೂ ಮಕ್ಕಳು ಭಯ ಬೀಳುವ ಪರಿಸ್ಥಿತಿಗೆ ನೂಕುವಂತಹ ಕಂಟೆಂಟ್‌ಗಳನ್ನು ತಮ್ಮ ವೇದಿಕೆಗಳಿಂದ ಸಂಪೂರ್ಣವಾಗಿ ತೊಲಗಿಸಬೇಕು ಎಂದು ಆಸ್ಟ್ರೇಲಿಯಾ ಸರ್ಕಾರ ಫೇಸ್‌ಬುಕ್, ಮೈಕ್ರೋಸಾಫ್ಟ್, ಆ್ಯಪಲ್ ಸೇರಿದಂತೆ ಇತರಟೆಕ್ ಕಂಪನಿಗಳಿಗೆ ತಾಕೀತು ಮಾಡಿದೆ.
ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್‌ನಂತಹ ಹಲವು ಕಂಪನಿಗಳು ತಮ್ಮ ಆದಾಯದಲ್ಲಿ ನಿಗದಿತ ಪಾಲನ್ನು ಮಾಧ್ಯಮಗಳಿಗೆ ಹಂಚಬೇಕು ಹಾಗೂ ಮಕ್ಕಳ ದೌರ್ಜನ್ಯದ ಕಂಟೆಂಟ್‌ಗಳನ್ನು ತೆಗೆದುಹಾಕಬೇಕು ಎಂದು 2021 ರಲ್ಲಿಆಸ್ಟ್ರೇಲಿಯಾ ಹೊಸ ಕಾನೂನನ್ನು ಜಾರಿಗೊಳಿಸಿತ್ತು.
’ಆದರೆ, ಈ ಕಾನೂನು ಪ್ರಕಾರ ಇನ್ನೂ ಕೂಡಫೇಸ್‌ಬುಕ್, ಮೈಕ್ರೋಸಾಫ್ಟ್, ಆ್ಯಪಲ್ ಸೇರಿದಂತೆ ಅನೇಕ ಟೆಕ್ ಕಂಪನಿಗಳು ತಮ್ಮ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ, ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿಲ್ಲ ಹಾಗೂ ನಿಲ್ಲಿಸುತ್ತಿಲ್ಲ. ಆ ರೀತಿಯ ಕಂಟೆಂಟ್‌ಗಳನ್ನುಮುಂದಿನ 1 ತಿಂಗಳೊಳಗೆ ತೆಗೆದುಹಾಕದಿದ್ದರೇ ಭಾರಿ ದಂಡ ತೆರಲು ಸಿದ್ಧವಾಗಿರಿ’ ಎಂದು ಆಸ್ಟ್ರೇಲಿಯಾ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ನೋಟಿಸ್ ಕಳುಹಿಸಿದೆ.
ನೋಟಿಸ್ ತಲುಪಿದ 28 ದಿನಗಳೊಳಗಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಒಂದು ದಿನಕ್ಕೆ 55,000 ಆಸ್ಟ್ರೇಲಿಯಾ ಡಾಲರ್ (₹3.60 ಕೋಟಿ) ದಂಡ ತೆರಬೇಕು ಎಂದು ಇಲಾಖೆ ಹೇಳಿದೆ.
‘ಡಾರ್ಕ್ ವೆಬ್‌ನಲ್ಲಿ ಮಕ್ಕಳ ಶೋಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ತಡೆಗಟ್ಟಲು ಆಗುತ್ತಿಲ್ಲ. ಆದರೆ, ಮುಖ್ಯವಾಹಿನಿಯ ಆನ್‌ಲೈನ್ ವೇದಿಕೆಗಳಲ್ಲೂ ಇದು ಹೆಚ್ಚು ನಡೆಯುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನೇ ಕೂರಲು ಆಗುವುದಿಲ್ಲ. ಪ್ರತಿದಿನ ನಮಗೆ ದೂರುಗಳು ಬರುತ್ತಿವೆ’ ಎಂದು ಸುರಕ್ಷತಾ ಕಮಿಷನರ್ ಜೂಲಿ ಇನ್‌ಮ್ಯಾನ್ ಹೇಳಿದ್ದಾರೆ.
‘ನೋಟಿಸ್ ಬಗ್ಗೆ ಶೀಘ್ರದಲ್ಲೇ ಉತ್ತರಿಸಲಾಗುವುದು ಹಾಗೂ ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಫೇಸ್‌ಬುಕ್ ಹಾಗೂ ಮೈಕ್ರೋಸಾಫ್ಟ್ ವಕ್ತಾರರು ಹೇಳಿದ್ದಾರೆ. ಆದರೆ, ಆ್ಯಪಲ್ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿಲ್ಲ.
ಈ ವರ್ಷ ಆನ್‌ಲೈನ್ ವೇದಿಕೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆಜಾಗತಿಕವಾಗಿ 29 ಮಿಲಿಯನ್ (2.9 ಕೋಟಿ) ಪ್ರಕರಣಗಳು ವರದಿಯಾಗಿವೆ ಎಂದು ‘ಅಮೆರಿಕ ಕಾಣೆಯಾದ ಮತ್ತು ಶೋಷಿತ ಮಕ್ಕಳರಾಷ್ಟ್ರೀಯ ಕೇಂದ್ರ’ದ ವರದಿಯನ್ನು ಉಲ್ಲೇಖಿಸಿ ಜೂಲಿಇನ್‌ಮ್ಯಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.