ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಟ್ವಿಟರ್ ಹ್ಯಾಂಡಲ್ ಪೇಜ್ @BJP4India ಫಾಲೋವರ್‌ಗಳ ಸಂಖ್ಯೆ 20 ಮಿಲಿಯನ್ ಅಂದರೆ 2 ಕೋಟಿಗೆ ತಲುಪಿದೆ.
ಈ ಕುರಿತು ಬಿಜೆಪಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದೆ. ಫಾಲೋವರ್‌ಗಳಿಗೆ ಧನ್ಯವಾದ ತಿಳಿಸಿದೆ.
2 ಕೋಟಿ ಫಾಲೋವರ್‌ಗಳ ಸಂಖ್ಯೆ ತಲುಪಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ‘ಈ ಮೂಲಕ ನಾವು ಹೊಸ ಅಧ್ಯಾಯ ಬರೆಯುತ್ತಿದ್ದೇವೆ. ಇದೊಂದು ಮೈಲಿಗಲ್ಲು, ಏಕತೆ, ಸೌಹಾರ್ಧತೆ ಮತ್ತು ನಮ್ಮ ಶಕ್ತಿಯನ್ನು ಇದು ತೋರಿಸುತ್ತದೆ’ ಎಂದಿದ್ದಾರೆ.
ಬಿಜೆಪಿಯು ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಒಂದು ರಾಜಕೀಯ ಪಕ್ಷವಾಗಿ ಈ ಮೂಲಕ ಹೊರಹೊಮ್ಮಿದೆ.
ವಿಶೇಷವೆಂದರೆ ಬಿಜೆಪಿಯ ಈ ಟ್ವಿಟರ್ ಪುಟ ಕೇವಲ ಮೂವರನ್ನು ಮಾತ್ರ ಫಾಲೋ ಮಾಡುತ್ತದೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆ ಲಿಸ್ಟ್‌ನಲ್ಲಿದ್ದಾರೆ.
ಇನ್ನು ಬಿಜೆಪಿಯ ಪ್ರಮುಖ ಎದುರಾಳಿ ಪಕ್ಷವಾಗಿರುವ ಕಾಂಗ್ರೆಸ್ @INCIndia ಟ್ವಿಟರ್‌ನಲ್ಲಿ 9.2 ಮಿಲಿಯನ್ (92 ಲಕ್ಷ) ಫಾಲೋವರ್‌ಗಳನ್ನು ಹೊಂದಿದೆ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಡೆಮಾಕ್ರಟಿಕ್ ಪಾರ್ಟಿ ಟ್ವಿಟರ್‌ನಲ್ಲಿ 2.3 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದರೇ, ಅಲ್ಲಿನ ವಿರೋಧ ಪಕ್ಷವಾಗಿರುವ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಾರ್ಟಿ 3.2 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.