ADVERTISEMENT

ತನ್ನ ಪ್ಲಾಸ್ಮಾ ನೀಡಿ ತಂದೆಯ ವಯಸ್ಸನ್ನು 25 ವರ್ಷ ತಗ್ಗಿಸಿದ ಆಧುನಿಕ ಪುರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2024, 12:41 IST
Last Updated 15 ಅಕ್ಟೋಬರ್ 2024, 12:41 IST
<div class="paragraphs"><p>ಬ್ರಯಾನ್ ಜಾನ್ಸನ್‌</p></div>

ಬ್ರಯಾನ್ ಜಾನ್ಸನ್‌

   

ಎಕ್ಸ್ ಚಿತ್ರ

ನ್ಯೂಯಾರ್ಕ್: ತಂತ್ರಜ್ಞಾನ ಆಧಾರಿತ ಕಂಪನಿಯನ್ನು ನಡೆಸುತ್ತಿರುವ ಬ್ರಯಾನ್ ಜಾನ್ಸನ್ ಎಂಬುವವರು ತಮ್ಮ ‘ಪರಿಶುದ್ಧವಾದ ಪ್ಲಾಸ್ಮಾ‘ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿದ್ದು, ಇದರಿಂದ ತನ್ನ ತಂದೆಯ ವಯಸ್ಸಾಗುವ ಪ್ರಕ್ರಿಯೆಯನ್ನು 25 ವರ್ಷ ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ.

ADVERTISEMENT

ಆ ಮೂಲಕ ಪೌರಾಣಿಕದಲ್ಲಿನ ಪಾತ್ರವಾದ ಚಕ್ರವರ್ತಿ ಯಯಾತಿಗೆ ಯೌವನ ಮರಳಿಸಿದ ಪುರುವಿನ ಕಥೆಯನ್ನು ಬ್ರಯಾನ್ ಅವರ ಈ ಪೋಸ್ಟ್ ನೆನಪಿಸುವಂತಿದೆ.

ಬ್ರಯಾನ್ ಜಾನ್ಸನ್ ಅವರು ಸಂಪೂರ್ಣ ಪ್ಲಾಸ್ಮಾ ಬದಲಾವಣೆ ಕ್ರಿಯೆಗೆ ತಮ್ಮನ್ನು ಸಜ್ಜುಗೊಳಿಸಿಕೊಂಡಿದ್ದರು. ಇದಕ್ಕಾಗಿ ನಡೆಸಿದ ‘ಪ್ರಾಜೆಕ್ಟ್ ಬ್ಲೂಪ್ರಿಂಟ್‌’ ಎಂಬ ಯೋಜನೆ ಕೈಗೊಂಡಿದ್ದರು. ಅದಕ್ಕಾಗಿ ಪ್ರತ್ಯೇಕ ಆಹಾರ ಕ್ರಮ, ನಿಯಮಿತ ವ್ಯಾಯಾಮ ನಡೆಸಿದ್ದರು. ಇದಕ್ಕಾಗಿ ಅವರು ವೈದ್ಯಕೀಯ ತಂಡವನ್ನೇ ನಿಯೋಜಿಸಿಕೊಂಡಿದ್ದರು. ಈ ವ್ಯವಸ್ಥೆಗಾಗಿ ಅವರು ವಾರ್ಷಿಕ ₹16 ಕೋಟಿ ಖರ್ಚು ಮಾಡಿದ್ದರು. 

ಜೀವಕೋಶಗಳ ಮರು ಉತ್ಪತ್ತಿ ಹಾಗೂ ವಯಸ್ಸಾಗದಂತೆ ತಡೆಯುವ ಚಿಕಿತ್ಸೆಯನ್ನು ಅಳವಡಿಸಿಕೊಂಡರು. ಇಲ್ಲಿ ಜಾನ್ಸನ್ ಅವರ ಪ್ಲಾಸ್ಮಾವನ್ನು ಆಲ್ಬುಮಿನ್‌ನೊಂದಿಗೆ ಬದಲಿಸಲಾಗಿತ್ತು. ಇದರಿಂದ ಅವರ ದೇಹದಲ್ಲಿನ ಕಲ್ಮಶವನ್ನು ಹೊರತೆಗೆಯಲು ಸಾಧ್ಯವಾಯಿತು’ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ಪ್ಲಾಸ್ಮಾ ನೋಡಿದ ವೈದ್ಯರು, ಇದು ದ್ರವರೂಪದ ಚಿನ್ನ ಎಂದು ಬಣ್ಣಿಸಿದ್ದರು. ಕಳೆದ 9 ವರ್ಷಗಳಿಂದ ಪ್ಲಾಸ್ಮಾ ಬದಲಾವಣೆ ಚಿಕಿತ್ಸೆ ನಡೆಸುತ್ತಿದ್ದೇನೆ. ಆದರೆ ಈವರೆಗೂ ನಾನು ಇಷ್ಟೊಂದು ಶುಚಿಯಾದ ಪ್ಲಾಸ್ಮಾವನ್ನು ನೋಡಿಲ್ಲ. ಹೀಗಾಗಿ ಅದನ್ನು ವ್ಯರ್ಥಗೊಳಿಸಲೂ ಮನಸ್ಸಾಗಲಿಲ್ಲ. ಈ ಪ್ರಕ್ರಿಯೆಯಿಂದ ಜಾನ್ಸನ್ ಅವರ ವಯಸ್ಸು 5.1 ವರ್ಷ ಕಡಿಮೆಯಾಗಿದೆಯಂತೆ. ಜತೆಗೆ ನನ್ನ ದೇಹದಿಂದ ತೆಗೆದ ಪ್ಲಾಸ್ಮಾದಲ್ಲಿ ಒಂದು ಲೀಟರ್ ಅನ್ನು ನನ್ನ ತಂದೆಗೆ ನೀಡಲಾಯಿತು. ಇದರಿಂದ ಅವರ ವಯಸ್ಸಾಗುವ ಪ್ರಕ್ರಿಯೆಯು 25 ವರ್ಷ ಹಿಂದಕ್ಕೆ ಹೋಗಿದೆ’ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಜಾನ್ಸನ್‌, ಅದರೊಂದಿಗೆ ತಮ್ಮ ಪ್ಲಾಸ್ಮಾವನ್ನೂ ಪ್ರದರ್ಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.