ಬೆಂಗಳೂರು: ಕಿರು ವಿಡಿಯೊ ರೂಪಿಸುವವರು ಹಾಗೂ ಇತರರ ಮೇಲೆ ಪ್ರಭಾವ ಬೀರಬಲ್ಲ ಯುವಕರು ಖ್ಯಾತಿ ಸಂಪಾದಿಸುವಂತೆ ಆಗಬೇಕು, ಜೊತೆಜೊತೆಗೇ ಆನ್‌ಲೈನ್ ಜಗತ್ತಿನಲ್ಲಿ ಒಂದು ವೃತ್ತಿಯನ್ನು ಕಟ್ಟಿಕೊಳ್ಳಬೇಕು ಎಂಬುದು ಉದ್ದೇಶದಿಂದ ಚಿಂಗಾರಿ ಆ್ಯಪ್, ‘ಚಿಂಗಾರಿ ಸ್ಟಾರ್’ ಸ್ಪರ್ಧೆಯನ್ನು ಈಚೆಗೆ ಘೋಷಿಸಿದೆ.
2020ರಲ್ಲಿ ಚಿಂಗಾರಿ ಆ್ಯಪ್‌ಗೆ ಕೇಂದ್ರ ಸರ್ಕಾರದ ಆತ್ಮನಿರ್ಭರ್ಭಾರತ ಅತ್ಯುತ್ತಮ ಆ್ಯಪ್ ಪ್ರಶಸ್ತಿ ಲಭಿಸಿದೆ. ಕಿರು ಅವಧಿಯ ವಿಡಿಯೊಗಳ ವಿಭಾಗದಲ್ಲಿ ಚಿಂಗಾರಿ ಆ್ಯಪ್ ಎರಡು ವರ್ಷಗಳ ಅವಧಿಯಲ್ಲಿ ತಾಂತ್ರಿಕವಾಗಿ ಹೊಸತನಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ನಂಬರ್ 1 ವಿಡಿಯೊ ಆ್ಯಪ್ ಆಗಿ ಬೆಳೆದಿದೆ ಎಂದು ಪ್ರಕಟಣೆ ತಿಳಿಸಿದೆ.
‘ವಿಡಿಯೊ ರೂಪಿಸುವವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿರುವುದು ನಮ್ಮ ವೇದಿಕೆಯು ವೇಗವಾಗಿ ಬೆಳವಣಿಗೆ ಕಾಣುವುದಕ್ಕೆ ಒಂದು ಕಾರಣ. ಇದರಿಂದಾಗಿ ಪ್ರತಿಭಾವಂತರು ನಮ್ಮ ಕಡೆ ಮುಖ ಮಾಡಿದ್ದಾರೆ. ಚಿಂಗಾರಿ ಆ್ಯಪ್ ಮೂಲಕ ವಿಡಿಯೊ ವೀಕ್ಷಿಸುವವರು ಕೂಡ ಆದಾಯ ಗಳಿಸಬಹುದು’ ಎಂದು ಆ್ಯಪ್‌ನ ಸಿಇಒ ಸುಮಿತ್ ಘೋಷ್ ಹೇಳಿದ್ದಾರೆ.
ಚಿಂಗಾರಿ ಆ್ಯಪ್‌ನಲ್ಲಿನ ಗಾರಿ ಟೋಕನ್‌ಗಳು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ, ವಿಡಿಯೊ ರೂಪಿಸುವವರಿಗೆ ಆ್ಯಪ್ ಮೂಲಕ ಆದಾಯ ಸಂಗ್ರಹಿಸಲು ನೆರವಾಗುತ್ತವೆ. 10 ಕೋಟಿಗೂ ಹೆಚ್ಚು ಜನ ಈಗ ಈ ಆ್ಯಪ್ ಬಳಸುತ್ತಿದ್ದಾರೆ. ಚಿಂಗಾರಿ ಸ್ಟಾರ್ ಸ್ಪರ್ಧೆಯಲ್ಲಿ ಜಯಗಳಿಸುವ ವ್ಯಕ್ತಿಗೆ ₹ 1 ಕೋಟಿ ಮೌಲ್ಯದ ಗಾರಿ ಟೋಕನ್‌ಗಳು ಸಿಗುತ್ತವೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.