ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಕ್ರಿಸ್‌ಮಸ್‌, ಹೊಸ ವರ್ಷದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2019, 10:36 IST
Last Updated 24 ಡಿಸೆಂಬರ್ 2019, 10:36 IST
ವಾಟ್ಸ್‌ಆ್ಯಪ್‌ ಸ್ಟಿಕ್ಕರ್
ವಾಟ್ಸ್‌ಆ್ಯಪ್‌ ಸ್ಟಿಕ್ಕರ್   

ಬೆಂಗಳೂರು:ಯಾವುದೇ ಹಬ್ಬ, ಆಚರಣೆ, ವಿಶೇಷ ದಿನ ಸಮೀಪಿಸುತ್ತಿದ್ದಂತೆ ಸಾಮಾಜಿಕ ಸಂಪರ್ಕ ಮಾಧ್ಯಮಗಳಲ್ಲಿ ಸಂದೇಶಗಳ ವಿನಿಮಯ ಜೋರಾಗುತ್ತದೆ. ವಿಶೇಷವಾಗಿ ಶುಭ ಕೋರಲು ಎಮೋಜಿಗಳು, ಫೋಟೊ ಹಾಗೂ ಸ್ಟಿಕ್ಕರ್‌ಗಳ ಬಳಕೆ ಹೆಚ್ಚಿದೆ. ಹೊಸ ವರ್ಷ ಮತ್ತು ಕ್ರಿಸ್‌ಮಸ್‌ ಹೊಸ್ತಿಲಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಸ್ಟಿಕ್ಕರ್‌ಗಳನ್ನು ಕಳಿಸಿ ಶುಭ ಕೋರುವುದು ಹೇಗೆ? ಇಲ್ಲಿದೆ ವಿವರ–

ಫೇಸ್‌ಬುಕ್‌ ಸ್ವಾಮ್ಯದ ಮೆಸೇಜಿಂಗ್‌ ಅಪ್ಲಿಕೇಷನ್‌ ವಾಟ್ಸ್‌ಆ್ಯಪ್‌ನಲ್ಲಿ ಈಗಂತೂ ಸ್ಟಿಕ್ಕರ್‌ಗಳದ್ದೇ ಟ್ರೆಂಡ್‌. ಟೈಪಿಸುವುದು ಅಥವಾ ಪೋಸ್ಟರ್, ಫೋಟೊ ಮಾತ್ರವೇಕಳಿಸಿ ಶುಭ ಕೋರುವುದು ಈಗ ಬೋರು! ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ವಿಶೇಷ ಸಂದರ್ಭಗಳಲ್ಲಿ ಹಲವು ಕ್ರಿಯಾತ್ಮಕ ಸ್ಟಿಕ್ಕರ್‌ಗಳನ್ನು ರೂಪಿಸಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅಪ್‌ಡೇಟ್‌ ಆಗಿರುವ ವಾಟ್ಸ್‌ಆ್ಯಪ್‌ನಲ್ಲಿ ಹುಡುಕಿದರೆ ಕೆಲವು ಸ್ಟಿಕ್ಕರ್‌ಗಳು ಸಿಗುತ್ತವೆ. ಅದಕ್ಕಿಂತಲೂ ಭಿನ್ನವಾದ, ನಿರ್ದಿಷ್ಟವಾದ ಸ್ಟಿಕ್ಕರ್‌ ಬೇಕೆಂದರೆ; ಆ್ಯಂಡ್ರಾಯ್ಡ್‌ ಒಎಸ್‌ ಸ್ಮಾರ್ಟ್‌ಫೋನ್‌ ಬಳಸುತ್ತಿರುವವರು ಗೂಗಲ್‌ ಪ್ಲೇ ಸ್ಟೋರ್‌ನಿಂದ 'ವಾಸ್ಟಿಕ್ಕರ್‌' ಪ್ಯಾಕ್‌ ಪಡೆದುಕೊಳ್ಳಬಹುದು.

ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ADVERTISEMENT

* ನಿಮ್ಮ ಸ್ಮಾರ್ಟ್‌ಫೋನ್‌ನಿಂದ ವಾಟ್ಸ್‌ಆ್ಯಪ್‌ ತೆರೆಯಿರಿ

* ಸ್ಟಿಕ್ಕರ್‌ ಕಳುಹಿಸುತ್ತಿರುವ ಗ್ರೂಪ್‌ ಅಥವಾ ವ್ಯಕ್ತಿಯ ಕಾಂಟ್ಯಾಕ್ಟ್‌ಗೆ ಹೋಗಿ ಮೆಸೇಜ್‌ ಬಾಕ್ಸ್‌ ಕ್ಲಿಕ್‌ ಮಾಡಿ

* ಎಮೋಜಿ ಬಟನ್‌ ಒತ್ತಿ; ಆ್ಯಪ್‌ ಸ್ಕ್ರೀನ್‌ನ ಕೆಳ ಭಾಗದಲ್ಲಿರುವ ಸ್ಟಿಕ್ಕರ್‌ ಐಕಾನ್‌ ಆಯ್ಕೆ ಮಾಡಿ

* ಪಕ್ಕದಲ್ಲಿ ಕಾಣುವ '+' ಐಕಾನ್‌ ಒತ್ತಿ; ಸ್ಟಿಕ್ಕರ್ ಸಂಗ್ರಹವಿರುವ ಪರದೆ ತೆರದುಕೊಳ್ಳುತ್ತದೆ. ಅಲ್ಲಿ ಅಗತ್ಯವಿರುವ ಹೊಸ ಸ್ಟಿಕ್ಕರ್‌ ಡೌನ್‌ಲೋಡ್‌ ಮಾಡಿಕೊಂಡು ಇತರರಿಗೆ ಕಳುಹಿಸಬಹುದು

* ಸಂಗ್ರಹದಲ್ಲಿ ಇರದ, ನಿರ್ದಿಷ್ಟ ಸ್ಟಿಕ್ಕರ್‌ಗಾಗಿ ಹುಡುಕಾಟ ನಡೆಸಿದ್ದರೆ; ಸ್ಕ್ರಾಲ್‌ ಡೌನ್‌ ಮಾಡಿ 'ಗೆಟ್‌ ಮೋರ್‌ ಸ್ಟಿಕ್ಕರ್ಸ್‌' ಆಯ್ಕೆ ಮಾಡಿ

* ಆ ಲಿಂಕ್‌ ಗೂಗಲ್‌ ಪ್ಲೇ ಸ್ಟೋರ್‌ಗೆ ಕರೆದೊಯ್ಯುತ್ತದೆ. ಅಲ್ಲಿ ಸ್ಟಿಕ್ಕರ್‌ಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಬಳದಾರರು ಅಗತ್ಯವಿರುವ ಯಾವುದೇ ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಸ್ತುತ ಕ್ರಿಸ್‌ಮಸ್‌ ವಿಶೇಷ ಸ್ಟಿಕ್ಕರ್‌ಗಳು ಟ್ರೆಂಡ್‌ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.