ಬೆಂಗಳೂರು: ಆಡಿಯೊ ಸಂವಹನ ಜಾಲತಾಣ ಕ್ಲಬ್‌ಹೌಸ್ ಈಗ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ ಕಲ್ಪಿಸುತ್ತಿದೆ.
ಆಹ್ವಾನಿತರಿಗೆ ಮಾತ್ರ ಎನ್ನುವ ಆಯ್ಕೆಯನ್ನು ಕ್ಲಬ್‌ಹೌಸ್ ರದ್ದುಪಡಿಸಿದೆ. ಫೇಸ್‌ಬುಕ್ ಹೊಸದಾಗಿ ಪರಿಚಯಿಸುತ್ತಿರುವ ಆಡಿಯೊ ರೂಮ್ ಮತ್ತು ಟ್ವಿಟರ್ ಸ್ಪೇಸಸ್ ಜತೆಗೆ ಸ್ಪರ್ಧೆಗೆ ಇಳಿದಿರುವ ಕ್ಲಬ್‌ಹೌಸ್, ಈಗ ಆಹ್ವಾನ ಇಲ್ಲದೆಯೇ ಬಳಕೆದಾರರು ಆ್ಯಪ್ ಸೇರಿಕೊಳ್ಳಬಹುದು ಎಂಬ ಅಪ್‌ಡೇಟ್ ಬಿಡುಗಡೆ ಮಾಡಿದೆ.
ಕ್ಲಬ್‌ಹೌಸ್ ಸ್ಥಾಪಕರಾದ ಪಾಲ್ ಡೇವಿಡ್ಸನ್ ಮತ್ತು ರೋಹನ್ ಸೇಠ್, ನೂತನ ಅಪ್‌ಡೇಟ್ ಬಗ್ಗೆ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ.
ಐಓಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ನೂತನ ವೈಶಿಷ್ಟ್ಯ ಲಭ್ಯವಾಗುತ್ತಿದೆ. ಹೊಸ ಅಪ್‌ಡೇಟ್ ಮೂಲಕ, ಯಾವುದೇ ಆಹ್ವಾನ ಇಲ್ಲದೆಯೇ ಕ್ಲಬ್‌ಹೌಸ್ ಆ್ಯಪ್‌ನಲ್ಲಿ ಖಾತೆ ತೆರೆಯಲು ಅವಕಾಶವಿದೆ.
ಮೇ ತಿಂಗಳಿನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾದ ಬಳಿಕ ಕ್ಲಬ್‌ಹೌಸ್ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.