ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ‘ಎಂ.ವಿ. ಎವರ್‌ಗ್ರೀನ್’ ಎಂಬ ದೈತ್ಯ ಕಂಟೇನರ್ ಹಡಗು ಸಿಲುಕಿಕೊಂಡಿರುವ ಪರಿಣಾಮ ಸಂಚಾರ ಬಿಕ್ಕಟ್ಟು ಎದುರಾಗಿರುವುದು ದೊಡ್ಡ ಸುದ್ದಿಯಾಗಿದೆ.
ಈ ಬೃಹತ್ ಗಾತ್ರದ ಹಡಗನ್ನು ತೆರವುಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದರ ಕಾರ್ಯಾಚರಣೆಗೆ ಚಿಕ್ಕ ಬುಲ್ಡೋಜರ್‌ವೊಂದು ದೈತ್ಯ ಹಡಗಿನ ಮುಂದೆ ಬಂದು ನಿಂತಿರುವ ಚಿತ್ರ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರವು ಮೀಮ್‌ಗಳ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಕೆಲವರು ಬುಲ್ಡೋಜರ್ ಅನ್ನು ತಮ್ಮೊಂದಿಗೆ ಮತ್ತು ಹಡಗನ್ನು ಜೀವನದ ಸಮಸ್ಯೆಗಳೊಂದಿಗೆ ಹೋಲಿಸಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮದೇ ರೇಖಾಚಿತ್ರಗಳ ಮೂಲಕ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.
ಟ್ವೀಟಿಗರೊಬ್ಬರು ಹಡಗನ್ನು ತಮ್ಮ ಸಂಬಂಧಿಕರಿಗೆ, ಕಾಲುವೆಯನ್ನು ತಮ್ಮ ಮನೆಗೆ ಮತ್ತು ಬುಲ್ಡೋಜರ್ ಅನ್ನು ತಮಗೆ ಹೋಲಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ನಿಮ್ಮನ್ನು ನಗೆಗಡಲಲ್ಲಿ ತೇಲಿಸುವ ಮೀಮ್‌ಗಳು ಇಲ್ಲಿವೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.