ನವದೆಹಲಿ: ಪರಾಗ್ ಅಗರ್‌ವಾಲ್ ನೇತೃತ್ವದ ಟ್ವಿಟರ್, ನಕಲಿ ಮತ್ತು ಬಾಟ್ ಖಾತೆಗಳ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದು ಎಲೊನ್ ಮಸ್ಕ್ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಮೂಲಕ ಜನಾಭಿಪ್ರಾಯ ರೂಪಿಸಲಾಗುತ್ತದೆ ಮತ್ತು ಸ್ಪಾಮ್ ಖಾತೆಗಳು ಜನರನ್ನು ವಂಚಿಸುತ್ತಿವೆ ಎಂದು ಎಲೊನ್ ಮಸ್ಕ್ ಆರೋಪಿಸಿದ್ದರು.
ಅಲ್ಲದೆ, ಟ್ವಿಟರ್ ಖರೀದಿ ಪ್ರಸ್ತಾವಕ್ಕೂ ಮೊದಲು, ಅದರಲ್ಲಿರುವ ನಕಲಿ ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಎಲ್ಲ ಸ್ಪಾಮ್ ಖಾತೆಗಳನ್ನು ನಿರ್ಬಂಧಿಸಬೇಕು ಎಂದು ಎಲೊನ್ ಮಸ್ಕ್ ಒತ್ತಾಯಿಸಿದ್ದರು.
ನಕಲಿ ಖಾತೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ವಿಟರ್ ಹೇಳಿತ್ತಾದರೂ, ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಕಂಪನಿ ವಿಫಲವಾಗಿತ್ತು. ಹೀಗಾಗಿ ಎಲೊನ್ ಮಸ್ಕ್, ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.