ಹೊಸದಿಲ್ಲಿ: ಸುಮಾರು 3500 ನೌಕರರನ್ನು ಕೆಲಸದಿಂದ ವಜಾ ಮಾಡಿದ ಬೆನ್ನಲ್ಲೇ, ಟ್ವಿಟರ್ ಮಾಲೀಕ ಇಲಾನ್ ಮಸ್ಕ್ ಇದೀಗ ನೌಕರರಿಗೆ ಇದ್ದ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ರದ್ದು ಮಾಡಿದ್ದಾರೆ.
ಬುಧವಾರ ತಡರಾತ್ರಿ ಟ್ವಿಟರ್ ಉದ್ಯೋಗಿಗಳಿಗೆ ಇಲಾನ್ ಮಸ್ಕ್ ಇಮೇಲ್ ಮಾಡಿದ್ದು, ‘ಭವಿಷ್ಯದಲ್ಲಿ ಕಷ್ಟ ದಿನಗಳನ್ನು ಎದುರಿಸಲು ಸಜ್ಜಾಗಿ‘ ಎಂದು ಹೇಳಿದ್ದಾರೆ.
‘ಟ್ವಿಟರ್ ಉದ್ಯೋಗಿಗಳಿಗೆ ರಿಮೋಟ್ ಕೆಲಸ (ವರ್ಕ್ ಫ್ರಂ ಹೋಮ್ ಹಾಗೂ ವರ್ಕ್ ಫ್ರಂ ಆಫೀಸ್) ಆಯ್ಕೆ ಇನ್ನು ಮುಂದೆ ಇರುವುದಿಲ್ಲ. ವಾರಕ್ಕೆ ಕನಿಷ್ಠ 40 ಗಂಟೆ ಉದ್ಯೋಗಿಗಳು ಕಚೇರಿಯಲ್ಲಿ ಇರಬೇಕು‘ ಎಂದು ಮೇಲ್‌ನಲ್ಲಿ ಹೇಳಲಾಗಿದೆ.
ಇಲಾನ್ ಮಸ್ಕ್ ಅವರು ಟ್ವಿಟರನ್ನು ಸ್ವಾಧೀನ ಪಡಿಸಿಕೊಂಡು ಸುಮಾರು ಎರಡು ವಾರಗಳು ಸಂದಿದೆ. ತಮ್ಮ ತೆಕ್ಕೆಗೆ ಟ್ವಿಟರ್ ಬರುತ್ತಿದ್ದಂತೆಯೆ ಸಿಇಒ ಪರಾಗ್ ಅಗರ್‌ವಾಲ್ ಅವರನ್ನು ಮನೆಗೆ ಕಳುಹಿಸಿದ್ದರು. ಬಳಿಕ ಆಡಳಿತ ಮಂಡಳಿಯನ್ನು ವಿಸರ್ಜಿಸಿದ್ದರು. ಇದರ ಬೆನ್ನಲ್ಲೇ ಮೂರುವರೆ ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಆ ಬಳಿಕ ಬ್ಲೂಟಿಕ್ ಇರುವವರಿಗೆ ಮಾಸಿಕ $8 ಶುಲ್ಕ ವಿಧಿಸಲು ಆರಂಭಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.