ADVERTISEMENT

ಟ್ವಿಟರ್‌ ಸಿಇಒ ಸ್ಥಾನದಿಂದ ಮಸ್ಕ್‌ ನಿರ್ಗಮಿಸಲಿ

ಪರವಾಗಿ ಶೇ 57.5ರಷ್ಟು ಮತ; ವಿರುದ್ಧವಾಗಿ ಶೇ 42.5 ಮತ

ಪಿಟಿಐ
Published 19 ಡಿಸೆಂಬರ್ 2022, 16:20 IST
Last Updated 19 ಡಿಸೆಂಬರ್ 2022, 16:20 IST
ಇಲಾನ್ ಮಸ್ಕ್‌
ಇಲಾನ್ ಮಸ್ಕ್‌   

ನ್ಯೂಯಾರ್ಕ್‌: ಸಾಮಾಜಿಕ ಜಾಲತಾಣದ ದೈತ್ಯ ಟ್ವಿಟರ್‌ ಸಂಸ್ಥೆಯ ಸಿಇಒ ಸ್ಥಾನದಿಂದ ಇಲಾನ್ ಮಸ್ಕ್‌ ಕೆಳಗಿಳಿಯುವುದು ಸೂಕ್ತವೆಂದು ಹೆಚ್ಚಿನ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿದ್ದಾರೆ.

ಟ್ವಿಟರ್‌ನ ಮಾಲೀಕತ್ವ ಪಡೆದ ‌ಎರಡು ತಿಂಗಳಲ್ಲೇ ಶತಕೋಟ್ಯಧಿಪತಿ ಮಸ್ಕ್‌ ಅವರಿಗೆ ಇದೊಂದು ಭಾರಿ ಹಿನ್ನಡೆ ಎನ್ನಲಾಗುತ್ತಿದೆ.

ಭಾನುವಾರ ಸಂಜೆ ಆರಂಭವಾದ ಈ ಸಮೀಕ್ಷೆಯಲ್ಲಿ 1.75 ಕೋಟಿ ಬಳಕೆದಾರರು ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಟ್ವಿಟರ್‌ ಸಿಇಒ ಸ್ಥಾನವನ್ನು ಮಸ್ಕ್‌ ತೊರೆಯಬೇಕೆಂಬುದರ ಪರವಾಗಿ ಶೇ 57.5ರಷ್ಟು ಬಳಕೆದಾರರು ಮತ ಚಲಾಯಿಸಿದರೆ, ಶೇ42.5ರಷ್ಟು ಬಳಕೆದಾರರು ಸಿಇಒ ಸ್ಥಾನ ತೊರೆಯಬಾರದೆಂದು ಮತ ಚಲಾಯಿಸಿದ್ದಾರೆ.

ADVERTISEMENT

ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನದಿಂದ ತಾನು ಕೆಳಗಿಳಿಯಬೇಕೇ ಅಥವಾ ಮುಂದುವರಿಯಬೇಕೇ ಎನ್ನುವ ಪ್ರಶ್ನೆಯನ್ನು ಬಳಕೆದಾರರ ಮುಂದಿರಿಸಿ, ಅಭಿಪ್ರಾಯ ಸಂಗ್ರಹಿಸಲುಟ್ವಿಟರ್‌ನಲ್ಲಿ ಸಮೀಕ್ಷೆಯ ಮೊರೆ ಹೋಗಿದ್ದರು. ಈ ಸಮೀಕ್ಷೆಯಲ್ಲಿ ಹೊರಹೊಮ್ಮುವ ಫಲಿತಾಂಶಕ್ಕೆ ಬದ್ಧವಾಗಿರುವುದಾಗಿಯೂ ಅವರು ಘೋಷಿಸಿದ್ದರು. ಫಲಿತಾಂಶ ಪ್ರಕಟವಾದ ನಂತರ ಮಸ್ಕ್‌ ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.