ಟೆಸ್ಲಾ ಖ್ಯಾತಿಯ ಉದ್ಯಮಿ ಇಲಾನ್ ಮಸ್ಕ್, ಟ್ವಿಟರ್ ಖರೀದಿಗೂ ಮುನ್ನ ನಕಲಿ ಖಾತೆಗಳ ಕುರಿತು ಸ್ಪಷ್ಟಪಡಿಸುವಂತೆ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ನಕಲಿ ಖಾತೆಗಳು ಹೆಚ್ಚಿವೆ ಮತ್ತು ಅವುಗಳ ಮೂಲಕ ಕೆಲವೊಂದು ಅಭಿಪ್ರಾಯ ಮೂಡಿಸಲಾಗುತ್ತದೆ ಎನ್ನುವ ಆರೋಪವಿರುವುದರಿಂದ, ನಕಲಿ ಖಾತೆಗಳ ವಿರುದ್ಧ ಕ್ರಮಕ್ಕೆ ಇಲಾನ್ ಮಸ್ಕ್ ಮುಂದಾಗಿದ್ದಾರೆ.
ಟ್ವಿಟರ್‌ನಲ್ಲಿರುವ ಒಟ್ಟು ಖಾತೆಗಳ ಪೈಕಿ, ಶೇ 5ಕ್ಕೂ ಕಡಿಮೆ ಸಂಖ್ಯೆಯಲ್ಲಿ ನಕಲಿ ಖಾತೆಗಳಿವೆ ಎನ್ನಲಾಗಿದೆ.
ಅವುಗಳನ್ನು ತೆಗೆದುಹಾಕುವುದು ಮತ್ತು ಈ ಬಗ್ಗೆ ಸ್ಪಷ್ಟನೆಯನ್ನು ಮಂಡಳಿ ನೀಡಿದ ಬಳಿಕವೇ ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಬರುವುದಾಗಿ ಮಸ್ಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.