ADVERTISEMENT

ಫೇಸ್‌ಬುಕ್‍ನಲ್ಲಿ ಮಾಹಿತಿ ಸೋರಿಕೆ: ಖಾತೆ ಸುರಕ್ಷಿತವಾಗಿದೆಯೇ? ಖಾತರಿ ಪಡಿಸಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 11:06 IST
Last Updated 13 ಅಕ್ಟೋಬರ್ 2018, 11:06 IST
ಫೇಸ್‍ಬುಕ್
ಫೇಸ್‍ಬುಕ್   

ನವದೆಹಲಿ: ಫೇಸ್‍ಬುಕ್‍ನಲ್ಲಿ ನಿಮ್ಮ ಖಾತೆಯಿಂದ ಬೇರೆಯವರಿಗೆ ಸಂದೇಶ ರವಾನೆಯಾಗಿದೆಯೇ? ಅಥವಾ ನಿಮಗರಿವಿಲ್ಲದಂತೆ ಇನ್ನು ಯಾವುದೋಫೋಟೊಗಳಿಗೆ ನೀವು ಟ್ಯಾಗ್ ಆಗಿದ್ದೀರಾ? ಹಾಗಾಗಿದ್ದರೆ ಗಮನಿಸಿ ನಿಮ್ಮ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿದೆ.

ಶುಕ್ರವಾರ ಸಾಮಾಜಿಕ ಮಾಧ್ಯಮವಾದ ಫೇಸ್‍ಬುಕ್‍ನಲ್ಲಿ ಕೆಲವು ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿವೆ.ಖುಷಿಯ ವಿಚಾರ ಏನೆಂದರೆ ಹ್ಯಾಕರ್‌ಗಳಿಗೆ ಬಳಕೆದಾರರ ಪಾಸ್‍ವರ್ಡ್ ಅಥವಾ ಆರ್ಥಿಕ ಮಾಹಿತಿಯಂಥಾ ಸೂಕ್ಷ್ಮ ವಿಷಯಗಳನ್ನು ಹ್ಯಾಕ್ ‍ಮಾಡಲು ಸಾಧ್ಯವಾಗಿಲ್ಲ.ಥರ್ಡ್ ಪಾರ್ಟಿ ಆ್ಯಪ್‍ಗಳಿಗೆ ಇದರಿಂದ ಯಾವುದೇ ಸಮಸ್ಯೆಯುಂಟಾಗಿಲ್ಲ. ಫೇಸ್‍ಬುಕ್‍ನಲ್ಲಿ ಕಂಡು ಬಂದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಿದೆ.

ಇತ್ತೀಚೆಗೆ 29 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆ ಹ್ಯಾಕ್ ಆಗಿತ್ತು. ಹ್ಯಾಕರ್‌ಗಳು ಫೋನ್ ಸಂಖ್ಯೆ, ಇಮೇಲ್, ಮನೆಯ ವಿಳಾಸ ಮತ್ತು ಸಂಬಂಧದ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದರು.

ADVERTISEMENT

ನಿಮ್ಮ ಫೇಸ್‍ಬುಕ್ ಹ್ಯಾಕ್ ಆಗಿದೆಯೇ ಚೆಕ್ ಮಾಡಿ
ಫೇಸ್‍ಬುಕ್‍ಗೆ ಲಾಗಿನ್ ಆಗಿ ಹೆಲ್ಪ್ ಸೆಂಟರ್ ಪುಟಕ್ಕೆ ಭೇಟಿ ನೀಡಿ.ನಿಮ್ಮ ಫೇಸ್‍ಬುಕ್ ಮಾಹಿತಿ ಸೋರಿಕೆ ಆಗಿದೆಯೇ ಇಲ್ಲವೇ ಎಂಬುದನ್ನು ಇಲ್ಲಿ ತಿಳಿಯಬಹುದು.

ಒಂದು ವೇಳೆ ನಿಮ್ಮ ಫೇಸ್‍ಬುಕ್ ನಿಂದ ಯಾವುದಾದರೂ ಮಾಹಿತಿ ಸೋರಿಕೆ ಆಗಿದ್ದರೆ, ಈ ರೀತಿಯ ಸಂದೇಶ ಅಲ್ಲಿ ಕಾಣುತ್ತದೆ.


ನಿಮ್ಮ ಖಾತೆ ಸುರಕ್ಷಿತವಾಗಿದ್ದರೆ ಈ ರೀತಿ ಸಂದೇಶ ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.