ಬೆಂಗಳೂರು: ಮೆಟಾ ಒಡೆತನದ ಫೇಸ್‌ಬುಕ್, ಮೆಸೆಂಜರ್‌ನಲ್ಲಿ ನೂತನ ಅಪ್‌ಡೇಟ್ ಲಭ್ಯವಾಗಿದೆ. ಬಳಕೆದಾರರು ವಿಡಿಯೊ, ವಾಯ್ಸ್ ಕರೆ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕ ಟ್ಯಾಬ್ ಆಯ್ಕೆ ನೀಡಲಾಗಿದೆ.
ಈ ಮೊದಲು, ಮೆಸೆಂಜರ್‌ನ ಚಾಟ್ ಆಯ್ಕೆಯಲ್ಲಿಯೇ ಕರೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ವಿಡಿಯೊ ಕರೆ ಮಾಡಲು ಮತ್ತು ವಾಯ್ಸ್ ಕರೆಗಾಗಿ ಚಾಟ್ ಪಕ್ಕದಲ್ಲಿರುವ ಐಕಾನ್ ಒತ್ತಬೇಕಿತ್ತು.
ನೂತನ ಅಪ್‌ಡೇಟ್‌ನಲ್ಲಿ ಪ್ರತ್ಯೇಕ ಕರೆ ಟ್ಯಾಬ್ ಅನ್ನು ನೀಡಲಾಗಿತ್ತು, ಅದರ ಜತೆಗೇ, ಚಾಟ್, ವಿಡಿಯೊ ಮತ್ತು ಪೀಪಲ್ ಎನ್ನುವ ಆಯ್ಕೆ ಕಾಣಿಸಿಕೊಳ್ಳುತ್ತದೆ.
ವಿಡಿಯೊ ಮತ್ತು ವಾಯ್ಸ್ ಕರೆ ಮಾಡಲು ಫೇಸ್‌ಬುಕ್ ಮೆಸೆಂಜರ್ ಅಷ್ಟೇನೂ ಬಳಕೆಯಲ್ಲಿ ಇಲ್ಲವಾದರೂ, ಅದನ್ನು ಪ್ರತ್ಯೇಕವಾಗಿ ಒದಗಿಸಿ, ಜನಪ್ರಿಯಗೊಳಿಸಲು ಮೆಟಾ ಮುಂದಾಗಿದೆ.
ಅಲ್ಲದೆ, ಆನ್‌ಲೈನ್ ಇರುವವರು ಮತ್ತು ಸ್ಟೋರೀಸ್ ಪೋಸ್ಟ್ ಮಾಡಿರುವುದನ್ನು ಮೆಸೆಂಜರ್‌ನಲ್ಲಿ ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.