ಸ್ಯಾನ್ ಫ್ರಾನ್ಸಿಸ್ಕೊ: ಫೇಸ್‌ಬುಕ್ ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ವರ್ಕ್ ಫ್ರಮ್ ಹೋಮ್ ಮಾಡಲು ಬಯಸುವ ಉದ್ಯೋಗಿಗಳು ಅದನ್ನು ಮುಂದುವರಿಸಬಹುದು, ಕಚೇರಿಗೆ ಬರಬೇಕಿಲ್ಲ ಎಂದು ಕಂಪನಿ ಬುಧವಾರ ಘೋಷಿಸಿದೆ.
ಜತೆಗೆ, ಇತರ ರಾಷ್ಟ್ರಗಳಿಗೆ ತೆರಳಿ ಅಲ್ಲಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದರೆ, ಅದಕ್ಕೂ ಅವಕಾಶ ಕಲ್ಪಿಸುತ್ತೇವೆ ಎಂದು ಫೇಸ್‌ಬುಕ್ ಹೇಳಿದ್ದು, ಉದ್ಯೋಗಿಗಳಿಗೆ ಮತ್ತಷ್ಟು ಅನುಕೂಲವಾಗಿದೆ.
ಜೂನ್ 15ರ ಬಳಿಕ ಫೇಸ್‌ಬುಕ್ ಉದ್ಯೋಗಿಗಳು ಬಯಸಿದಲ್ಲಿ ಕೆಲಸ ಮಾಡಬಹುದು ಎಂದು ಕಂಪನಿ ಹೇಳಿದ್ದು, ನಮಗೆ ಹೇಗೆ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಾಗಿದ್ದು, ಎಲ್ಲಿ ಕೆಲಸ ಮಾಡುತ್ತೇವೆ ಎಂದಲ್ಲ ಎಂದು ತಿಳಿಸಿದೆ.
ಉದ್ಯೋಗಿಗಳಿಗೆ ಎಲ್ಲಿ ಅನುಕೂಲವೋ, ಎಲ್ಲಿ ಕೆಲಸಕ್ಕೆ ಸೂಕ್ತ ವಾತಾವರಣ ಇದೆಯೋ, ಅಲ್ಲಿ ಕೆಲಸ ಮಾಡಲಿ. ಕಚೇರಿಗೆ ಬಂದು ಕೆಲಸ ಮಾಡಲು ಕೂಡ ಅವಕಾಶವಿದೆ. ಅವರಿಚ್ಛೆಯಂತೆ ಕೆಲಸ ನಿರ್ವಹಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಫೇಸ್‌ಬುಕ್ ತಿಳಿಸಿದೆ.
ಫೇಸ್‌ಬುಕ್ ಇತ್ತೀಚೆಗಷ್ಟೇ ಹಂತಹಂತವಾಗಿ ಕಚೇರಿ ತೆರೆದು ಉದ್ಯೋಗಿಗಳನ್ನು ಆಹ್ವಾನಿಸಿತ್ತು. ಈಗ ಮತ್ತೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.