ADVERTISEMENT

ಹೆಸರು ಬದಲಾಯಿಸಲು ಮುಂದಾದ ಫೇಸ್‌ಬುಕ್: ವರದಿ

ರಾಯಿಟರ್ಸ್
Published 20 ಅಕ್ಟೋಬರ್ 2021, 6:07 IST
Last Updated 20 ಅಕ್ಟೋಬರ್ 2021, 6:07 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ವಾಷಿಂಗ್ಟನ್: ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆ ಫೇಸ್‌ಬುಕ್ ಹೆಸರು ಬದಲಿಸುವ ಮೂಲಕ ರೀಬ್ರ್ಯಾಂಡ್ ಮಾಡಲು ಯೋಜಿಸುತ್ತಿದೆ ಎಂದು ಮೂಲವನ್ನು ಉಲ್ಲೇಖಿಸಿ ದಿ ವರ್ಜ್ ವರದಿ ಮಾಡಿದೆ.

ಅಕ್ಟೋಬರ್ 28ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಸಮ್ಮೇಳನದಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಯೋಜಿಸಿದ್ದಾರೆ. ಹಾಗಾಗಿ, ಶೀಘ್ರದಲ್ಲೇ ಹೆಸರು ಅನಾವರಣಗೊಳಿಸಬಹುದು ಎಂದು ವರ್ಜ್ ವರದಿ ತಿಳಿಸಿದೆ.

ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಫೇಸ್‌ಬುಕ್. ‘ವದಂತಿ ಅಥವಾ ಊಹಾಪೋಹ’ಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.

ಫೇಸ್‌ಬುಕ್ ವ್ಯವಹಾರದ ಮೇಲೆ ಅಮೆರಿಕ ಸರ್ಕಾರದ ಪರಿಶೀಲನೆಯು ಹೆಚ್ಚುತ್ತಿರುವ ಸಮಯದಲ್ಲೇ ಸಂಸ್ಥೆ ಈ ಸುದ್ದಿಗೆ ಗ್ರಾಸವಾಗಿದೆ. ಫೇಸ್‌ಬುಕ್‌ ಕಾರ್ಯನಿರ್ವಹಣೆ ಕುರಿತಂತೆ ಅಮೆರಿಕ ಸಂಸತ್ತಿನಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ.

ರೀಬ್ರ್ಯಾಂಡ್ ಮಾಡುವುದರಿಂದ ಫೇಸ್‌ಬುಕ್‌ನ ಒಡೆತನದಲ್ಲಿರುವ ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಮತ್ತು ಅಕ್ಯುಲಸ್ ಮತ್ತು ಇತರರ ಅಪ್ಲಿಕೇಶನ್‌ಗಳಲ್ಲೂ ಬದಲಾವಣೆ ಬರಲಿದೆ ಎಂದೂ ವರ್ಜ್ ವರದಿ ಮಾಡಿದೆ.

ಸಿಲಿಕಾನ್ ವ್ಯಾಲಿಯಲ್ಲಿ ಕಂಪನಿಗಳು ತಮ್ಮ ಸೇವೆಗಳನ್ನು ವಿಸ್ತರಿಸಲು ಪ್ರಯತ್ನ ಮಾಡಿದಂತೆ ಹೆಸರನ್ನೂ ಬದಲಾಯಿಸುವುದು ವಿರಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.