ADVERTISEMENT

Paris Olympics 2024: ವಿಶೇಷ ಡೂಡಲ್‌ ಮೂಲಕ ಸಂಭ್ರಮಿಸಿದ ಗೂಗಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2024, 7:09 IST
Last Updated 26 ಜುಲೈ 2024, 7:09 IST
<div class="paragraphs"><p>ಗೂಗಲ್‌ ವಿಶೇಷ ಡೂಡಲ್‌</p></div>

ಗೂಗಲ್‌ ವಿಶೇಷ ಡೂಡಲ್‌

   

(ಚಿತ್ರ ಕೃಪೆ ಗೂಗಲ್)

ಬೆಂಗಳೂರು: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ‘ಬೆಳಕಿನ ನಗರಿ’ ಪ್ಯಾರಿಸ್‌ ಸಜ್ಜಾಗಿದೆ. ಬಹುನಿರೀಕ್ಷಿತ ಈ ಕ್ರೀಡಾ ಜಾತ್ರೆಯನ್ನು ಗೂಗಲ್‌ ವಿಶೇಷ ಡೂಡಲ್‌ ಮೂಲಕ ಸಂಭ್ರಮಿಸಿದೆ.

ADVERTISEMENT

ಸೀನ್​ ನದಿಯ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅದರಂತೆ ಗೂಗಲ್​​ ​ನದಿಯ ವಿನ್ಯಾಸದಲ್ಲಿ ಡೂಡಲ್​​ ಅನ್ನು ರಚಿಸಿದೆ. ಇದರ ಮೇಲೆ ಕ್ಲಿಕ್​ ಮಾಡಿದರೆ, ಪ್ಯಾರಿಸ್ ಒಲಿಂಪಿಕ್ಸ್​ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಿಗುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಗೂಗಲ್ ಡೂಡಲ್ ಡಿಸೈನರ್ ಹೆಸರನ್ನು ಬಹಿರಂಗಪಡಿಸಿಲ್ಲ.

ಬರೋಬ್ಬರಿ ಒಂದು ಶತಮಾನದ ನಂತರ ಬೇಸಿಗೆಯ ಒಲಿಂಪಿಕ್ ಕೂಟಕ್ಕೆ ಪ್ಯಾರಿಸ್ ವೇದಿಕೆಯಾಗುತ್ತಿದೆ. ಮೂರು ವರ್ಷಗಳ ಅಂತರದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕೂಡ ಇದಾಗಿದೆ. 2020ರಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್‌ ಕೋವಿಡ್ ಮಹಾಮಾರಿಯಿಂದಾಗಿ 2021ರಲ್ಲಿ ನಡೆದಿತ್ತು. ಇದೀಗ ಕೋವಿಡ್ ನಂತರದ ಯುಗದಲ್ಲಿ ನಡೆಯುತ್ತಿರುವ ‘ಮೊದಲ ಕೂಟ‘ಕ್ಕೆ ಐಫೆಲ್ ಟವರ್‌ ನಗರಿ ಆತಿಥ್ಯ ವಹಿಸುತ್ತಿದೆ.

ಇಂದು ರಾತ್ರಿ 11.30ಕ್ಕೆ (ಭಾರತೀಯ ಕಾಲಮಾನ) ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಚಾಲನೆ ನೀಡಲಿದ್ದಾರೆ.

ಜುಲೈ 26 ರಿಂದ ಆಗಸ್ಟ್ 11ರ ವರೆಗೆ ನಡೆಯಲಿರುವ ಈ ಕ್ರೀಡಾಕೂಟಕ್ಕೆ 206 ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಭಾರತದ 117 ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.