ADVERTISEMENT

ಐಟಿ ನಿಯಮ ಅನುಸರಣೆಗೆ ಕೇಂದ್ರದಿಂದ ಟ್ವಿಟರ್‌ಗೆ ಕೊನೆಯ ನೋಟಿಸ್

ಪಿಟಿಐ
Published 5 ಜೂನ್ 2021, 9:33 IST
Last Updated 5 ಜೂನ್ 2021, 9:33 IST
ಟ್ವಿಟರ್
ಟ್ವಿಟರ್    

ನವದೆಹಲಿ: ಹೊಸ ಐಟಿ ನಿಯಮಗಳ ಅನುಸರಣೆಗೆ ಟ್ವಿಟರ್‌ಗೆ ಕೊನೆಯ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಶನಿವಾರದಂದು ನೋಟಿಸ್ ಜಾರಿಗೊಳಿಸಿದೆ.

ಹೊಸ ನಿಮಯಗಳನ್ನು ಪಾಲಿಸುವಲ್ಲಿ ವಿಫಲವಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ನಿಮಯಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸಿರುವುದು ಮೈಕ್ರೋಬ್ಲಾಗಿಂಗ್ ಸೈಟ್‌ನ ಬದ್ಧತೆಯಕೊರತೆಯಾಗಿದೆ. ಅಲ್ಲದೆಈವೇದಿಕೆಯಲ್ಲಿ ದೇಶದ ಜನರಿಗೆ ಸುರಕ್ಷಿತ ಅನುಭವ ನೀಡುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ:

ADVERTISEMENT

ದಶಕದಿಂದಲೂ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹೊರತಾಗಿಯೂ ದೇಶದ ಜನರಿಗೆ ಈ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಸಮಯೋಚಿತವಾಗಿ ಪಾರದರ್ಶಕವಾಗಿ ಬಗೆಹರಿಸುವ ನಿಯಮವನ್ನು ಒಪ್ಪಿಕೊಳ್ಳಲು ಟ್ವಿಟರ್ ನಿರಾಕರಿಸಿದೆ ಎಂದು ಐಟಿ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.