ಬೆಂಗಳೂರು: ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಟ್ವಿಟರ್‌ನಲ್ಲಿ ತೀವ್ರ ಟ್ರೋಲ್ ಆಗಿದ್ದಾರೆ. #Heng_pung_lee ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ #Heng_pung_lee ಟಾಪ್ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿತು. ಇದರ ಜೊತೆಗೆ #ಹೆಂಗ್_ಪುಂಗ್_ಲೀ ಮತ್ತು #ಹೆಂಗ್_ಪುಂಗ್_ಲಿ ಹ್ಯಾಶ್ ಟ್ಯಾಗ್‌ಗಳು ಬೆಂಗಳೂರು ಮಟ್ಟಿಗೆ ಟ್ರೆಂಡ್ ಆದವು. ರಾತ್ರಿ ಹೊತ್ತಿಗೆ #Heng_pung_lee ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್ ಮಾಡಿದ್ದಾರೆ.
ತಮ್ಮ ಚರ್ಚೆಗಳನ್ನು ಚಕ್ರವರ್ತಿ ಸೂಲಿಬೆಲೆ ಅವರ ಅಧಿಕೃತ ಟ್ವಿಟರ್ ಖಾತೆ(@astitvam)ಗೆ ಟ್ಯಾಗ್ ಮಾಡಿದ ನೆಟ್ಟಿಗರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ, ಅವರ ಭಾಷಣದ ಹಲವು ತುಣುಕುಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರನ್ನು ಡ್ರೋನ್ ಪ್ರತಾಪ್ ಅವರಿಗೂ ಸಮೀಕರಿಸಿ ಟ್ವೀಟ್‌ಗಳನ್ನು ಮಾಡಲಾಯಿತು.
#Heng_pung_lee ಈ ಜಗತ್ತಿನಲ್ಲಿ ಚಿನ್ನದ ರಸ್ತೆಗಳನ್ನು ನಿರ್ಮಿಸಿದ ಮೊದಲಿಗ ಎಂದು ಕಶ್ಯಪ್ ನಂದನ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಹಾಕಿದ್ದರು.
ಡ್ರೋನ್ ಪ್ರತಾಪ್ ಸುಳ್ಳು ಡ್ರೋನ್‌ಗಳನ್ನು ಹಾರಿಸಿರಬಹುದು. ಆದರೆ, ಚಕ್ರವರ್ತಿ ಸೂಲಿಬೆಲೆ ಅವರು ಸುಳ್ಳು ರಾಕೆಟ್‌ಗಳನ್ನೇ ಹಾರಿಸಿದ್ದಾರೆ. ಡ್ರೋನ್ ಪ್ರತಾಪ್‌ನನ್ನು ಕ್ಷಮಿಸಿ. ಯಾಕೆಂದರೆ ಆತ ಕೋಮುವಾದದ ಪ್ರತಿಪಾದಕನಲ್ಲ ಎಂದು ಭಾವನಾ ಮುರಳೀಧರ್ ಎಂಬುವವರು ಬರೆದುಕೊಂಡಿದ್ದಾರೆ.
ಗಾಲ್ವಾನ್ ಕಣಿವೆ, ಪಿಎಂ ಕೇರ್ಸ್, ವಲಸಿಗರು, ಸಿಎಎ–ಎನ್‌ಆರ್‌ಸಿ, ಇಂಧನ ದರ, 20 ಲಕ್ಷ ಕೋಟಿ ಪ್ಯಾಕೇಜ್, ನೋಟು ಅಮಾನ್ಯೀಕರಣ, ನಿರುದ್ಯೋಗ, ಕೋವಿಡ್–19 ಬಗ್ಗೆ ಇವರು ಈ ವರೆಗೆ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆಯೇ ಎಂದು ಕೇಳಿ ಚಿರು ಎಂಬುವವರು ಚಕ್ರವರ್ತಿ ಸೂಲಿಬೆಲೆ ಅವರಿಗೆ ಟ್ಯಾಗ್ ಮಾಡಿದ್ದರು.
ಇನ್ನಷ್ಟು...
ಟ್ರೆಂಡಿಂಗ್ ಚರ್ಚೆ ನೋಡಲು ಕ್ಲಿಕ್ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.