ಇಸ್ಲಾಮಾಬಾದ್:ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶಾಹಬಾಝ್ ಷರೀಫ್ ಪಾಕ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಅವರ ‘ವರ್ಣರಂಜಿತ‘ ವೈವಾಹಿಕ ಬದುಕಿನ ಮಾಹಿತಿ ಇಲ್ಲಿದೆ.
ಈ ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ಅವರು ಮೂರು ಮದುವೆಯಾಗಿದ್ದರು. ಅವರಿಗಿಂತಲೂ ಎರಡು ಹೆಜ್ಜೆ ಮುಂದಿರುವಶಾಹಬಾಝ್ ಷರೀಫ್ ಐವರನ್ನು ಮದುವೆಯಾಗಿದ್ದಾರೆ. ಇವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ (ತಮ್ಮ).
ಶಾಹಬಾಝ್ ಪ್ರಧಾನಿಯಾಗುತ್ತಿದ್ದಂತೆ ಅವರ ವೈವಾಹಿಕ ಜೀವನದ ಸುದ್ದಿಗಳು ಪಾಕಿಸ್ತಾನದಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿವೆ. ಶಾಹಬಾಝ್ ಅವರ ಪತ್ನಿಯರ ಫೋಟೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.
ಇಮ್ರಾನ್ ಖಾನ್ ಅವರಿಗಿಂತ ಒಂದು ವರ್ಷ ದೊಡ್ಡವರಾದಶಾಹಬಾಝ್ ಷರೀಫ್ ಅವರಿಗೆ 71 ವರ್ಷದ ಹರೆಯ. ಅವರು ತಮ್ಮ ವೈವಾಹಿಕ ಜೀವನದಲ್ಲಿ ಮೂವರಿಗೆ ವಿಚ್ಛೇದನ ನೀಡಿದ್ದು ಸದ್ಯ ಡುರ್ರಾನಿ ಜತೆ ಸಂಸಾರ ಮಾಡುತ್ತಿದ್ದಾರೆ. ಐವರು ಪತ್ನಿಯ ಪೈಕಿ ಇಬ್ಬರು ಮರಣ ಹೊಂದಿದ್ದಾರೆ.
ಮದುವೆಯ ಕಾರಣಕ್ಕೆ ಅವರ ರಾಜಕೀಯ ಜೀವನದಂತೆಯೇ ವೈವಾಹಿಕ ಬದುಕು ಪಾಕಿಸ್ತಾನದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. 1973ರಲ್ಲಿ ನುಸ್ರತ್ ಬೇಗಂ ಅವರನ್ನುಶಾಹಬಾಝ್ ಮೊದಲ ಮದುವೆಯಾದರು. ಅವರೊಂದಿಗೆ 20 ವರ್ಷಗಳ ಕಾಲ ಸಹ ಜೀವನ ನಡೆಸಿದರು. ನಸ್ರತ್ ಬೇಗಂ ನಿಧನರಾದ ಬಳಿಕ 2003ರಲ್ಲಿ ಅವರು ಎರಡನೇ ಮದುವೆಯಾದರು.
1993ರಲ್ಲಿ ಶಾಹಬಾಝ್ ಅವರು ನಿಲೋಫರ್ ಖೋಸಾ ಜತೆ ರಹಸ್ಯವಾಗಿ ಸಂಸರಾ ನಡೆಸಲು ಆರಂಭಿಸಿದರು. ಈ ವಿಷಯವನ್ನು ಅಣ್ಣ ನವಾಜ್ ಹಾಗೂ ಕುಟುಂಬಕ್ಕೆ ತಿಳಿಸಿ ಒಪ್ಪಿಗೆ ಪಡೆದುಕೊಂಡಿದ್ದರು. 1994–1995ರ ನಡುವೆ ಪಾಕಿಸ್ತಾನದಲ್ಲಿ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಅಲಿಯಾ ಹನಿ ಅವರನ್ನು ರಹಸ್ಯವಾಗಿ ಮದುವೆಯಾದರು. ಇದಕ್ಕೆ ನವಾಜ್ ಷರೀಫ್ ಮತ್ತು ಕುಟುಂಬದವರು ವಿರೋಧ ವ್ಯಕ್ತಪಡಿಸಿದರು. ಹಾಗೇ ಈ ಮದುವೆಗೆ ಅವರು ಮಾನ್ಯತೆ ನೀಡಲಿಲ್ಲ. ಅಂತಿಮವಾಗಿ ಶಹಬಾಝ್, ಅಲಿಯಾ ಹನಿ ಅವರ ಜೊತೆಗಿನ ವೈವಾಹಿಕ ಜೀವನವನ್ನು ಒಂದೇ ವರ್ಷಕ್ಕೆ ಅಂತ್ಯಗೊಳಿಸಿದರು. ನಂತರನಿಲೋಫರ್ ಖೋಸಾ ಅವರ ಜೊತೆ ಸಂಸಾರವನ್ನು ಮುಂದುವರೆಸಿದರು.
ನಿಲೋಫರ್ ಖೋಸಾ ಅವರಿಂದ ದೂರವಾಗಿ 2003ರಲ್ಲಿತೆಹ್ಮಿನಾ ಡುರ್ರಾನಿ ಅವರ ಜೊತೆ ಅಧಿಕೃತವಾಗಿ 2ನೇ ಮದುವೆಯಾದರು. 2012ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿಕಲ್ಸುಮ್ ಹಯೀ ಜತೆ ಗೋಪ್ಯ ವಿವಾಹವಾದರು.
ನವಾಜ್ ಷರೀಫ್ ಕುಟುಂಬ ಶಾಹಬಾಝ್ ಅವರ ಎರಡು ಮದುವೆಗಳನ್ನು ಮಾತ್ರ ಮಾನ್ಯ ಮಾಡಿದೆ. ಸದ್ಯ ಅವರು 2ನೇ ಪತ್ನಿ ಡ್ರುರಾನಿ ಜತೆ ಸಂಸಾರ ನಡೆಸುತ್ತಿದ್ದಾರೆ. 2012 ರಹಸ್ಯವಾಗಿ ಮದುವೆಯಾಗಿದ್ದಕಲ್ಸುಮ್ ಹಯೀ ಅವರಿಂದಲೂ ಬೇರ್ಪಟ್ಟಿದ್ದಾರೆ. ರೂಪದರ್ಶಿ ಆಲಿಯಾ ಕೂಡ ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಮೊದಲ ಪತ್ನಿ ನುಸ್ರತ್ ಬೇಗಂ ಅವರಿಂದ ನಾಲ್ವರು ಮಕ್ಕಳನ್ನು ಪಡೆದಿದ್ದಾರೆ. ಇವರಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರ ಪೈಕಿ ಹಮ್ಜಾ ಶಾಹಬಾಝ್ ರಾಜಕೀಯವಾಗಿ ಗುರುತಿಸಿಕೊಂಡಿದ್ದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.