ಬೆಂಗಳೂರು: ಜನಪ್ರಿಯ ಅಪ್ಲಿಕೇಶನ್ ವಾಟ್ಸ್‌ಆ್ಯಪ್, ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಪೋಲಿಂಗ್ ಫೀಚರ್ ಪರಿಚಯಿಸಿದೆ.
ಗ್ರೂಪ್ ಮತ್ತು ವೈಯಕ್ತಿಕ ಚಾಟ್‌ಗಳಲ್ಲಿ ಪೋಲ್ ಅನ್ನು ಬಳಸಬಹುದಾಗಿದೆ.
ಬಳಕೆದಾರರು ವಾಟ್ಸ್‌ಆ್ಯಪ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಇಲ್ಲವೇ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬೇಕಿದೆ.
ವಾಟ್ಸ್‌ಆ್ಯಪ್ ಬಳಕೆದಾರರು, ಗ್ರೂಪ್ ಅಥವಾ ವೈಯಕ್ತಿಕ ಚಾಟ್‌ಗೆ ತೆರಳಿ, ಅಲ್ಲಿ, ಐಫೋನ್‌ನಲ್ಲಾದರೆ ಚಾಟ್‌ಬಾಕ್ಸ್‌ನಲ್ಲಿರುವ + ಆಯ್ಕೆ ಒತ್ತಿ, ಅದರಲ್ಲಿ ಪೋಲ್ ಆಯ್ಕೆ ಮಾಡಿ. ಆ್ಯಂಡ್ರಾಯ್ಡ್ ಬಳಕೆದಾರರು ಚಾಟ್‌ಬಾಕ್ಸ್‌ನಲ್ಲಿ ಅಟ್ಯಾಚ್‌ಮೆಂಟ್ ಕ್ಲಿಪ್ ಇರುವುದನ್ನು ಸೆಲೆಕ್ಟ್ ಮಾಡಿ, ನಂತರ ಪೋಲ್ ಆಯ್ದುಕೊಳ್ಳಿ.
ಬಳಿಕ, ನಿಮಗೆ ಬೇಕಾದ ಪೋಲ್ ರಚಿಸಬಹುದು. ಅದರಲ್ಲಿ ಒಂದಕ್ಕಿಂತ ಹೆಚ್ಚಿನ ಆಯ್ಕೆಯನ್ನು ನೀಡಬಹುದು. ಗ್ರೂಪ್‌ಗಳಲ್ಲಿ ಈ ಪೋಲ್ ಆಯ್ಕೆಯನ್ನು ಅಗತ್ಯ ಸಂದರ್ಭದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.