ADVERTISEMENT

ಬೆಂಗಳೂರು ಮೂಲದ ಸಾಮಾಜಿಕ ಮಾಧ್ಯಮ ‘ಕೂ’ ಬಂದ್!

ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಹಾಗೂ ಟೆಕಿ ಅಪ್ರಮೇಯ ರಾಧಾಕೃಷ್ಣ ರೂವಾರಿಯಾಗಿದ್ದ ಡಿಜಿಟಲ್ ಸಾಮಾಜಿಕ ಮಾಧ್ಯಮ ‘ಕೂ’ (Koo) ಆ್ಯಪ್ ಬಂದ್ ಆಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2024, 10:44 IST
Last Updated 3 ಜುಲೈ 2024, 10:44 IST
<div class="paragraphs"><p>ಕೂ ಆ್ಯಪ್</p></div>

ಕೂ ಆ್ಯಪ್

   

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಡಿಜಿಟಲ್ ಸಾಮಾಜಿಕ ಮಾಧ್ಯಮ ‘ಕೂ’ (Koo) ಬಂದ್ ಆಗಿದೆ.

ಹೌದು ಬೆಂಗಳೂರಿನ ಟೆಕಿ ಅಪ್ರಮೇಯ ರಾಧಾಕೃಷ್ಣ ಅವರು ರೂವಾರಿಯಾಗಿದ್ದ ಮೈಕ್ರೊ ಬ್ಲಾಗಿಂಗ್ 'ಕೂ' ಆ್ಯಪ್ ವೇದಿಕೆ ಸ್ಥಗಿತಗೊಂಡಿದೆ ಎಂದು ಘೋಷಿಸಲಾಗಿದೆ.

ADVERTISEMENT

ಸ್ವತಃ ಅಪ್ರಮೇಯ ರಾಧಾಕೃಷ್ಣ ಅವರೇ ಲಿಂಕ್ಡಿನ್‌ ವೇದಿಕೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಾಲುದಾರರ ಜೊತೆಗಿನ ಮಾತುಕತೆಗಳು ವಿಫಲವಾಗಿದೆ. ನಾವು ಕೂ ವೇದಿಕೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಅವರು ಘೋಷಣೆ ಮಾಡಿದ್ದಾರೆ.

2020 ರಲ್ಲಿ ದೇಶದಲ್ಲಿ ಟ್ವಿಟರ್ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಾಗ ಕೂ ವೇದಿಕೆ ಚಿಗುರೊಡೆದಿತ್ತು. ಟ್ವಿಟರ್‌ಗೆ ಪರ್ಯಾಯ ಎಂದು ಕೂ ವನ್ನು ಬಿಂಬಿಸಲಾಗಿತ್ತು. ಆದರೆ, ಡಿಜಿಟಲ್ ವೇದಿಕೆಯಲ್ಲಿ ಅಸ್ತಿತ್ವ ಸ್ಥಾಪಿಸಲು ಕೂ ವಿಫಲವಾಗಿದೆ.

ಕೂ ಅಂದುಕೊಂಡಂತೆ ಸಾಧನೆ ಮಾಡದಿದ್ದರಿಂದ ಡೈಲಿ ಹಂಟ್ ಕಂಪನಿಗೆ ಕೂ ವನ್ನು ಮಾರುವ ತಯಾರಿ ನಡೆದಿತ್ತು. ಆದರೆ ಈ ಒಪ್ಪಂದ ಮುರಿದು ಬಿದ್ದಿದೆ ಎನ್ನಲಾಗಿದೆ.

ಕೂ ಹೂಡಿಕೆದಾರರಿಂದ ಸುಮಾರು 60 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿತ್ತು. ಕೂಗೆ ಆಂಡ್ರಾಯ್ಡ್‌ನಲ್ಲಿ 10 ಮಿಲಿಯನ್‌ಗೂ ಅಧಿಕ ಬಳಕೆದಾರರಿದ್ದರು.

ಕೂ ಬಳಕೆದಾರರು ತಮ್ಮ ಮನಸ್ಸಿನ ಭಾವನೆಗಳನ್ನು ಧ್ವನಿ, ವಿಡಿಯೊ ಮತ್ತು ಅಕ್ಷರ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಬಹುದಾಗಿತ್ತು. ಘಟನಾವಳಿಗಳಿಗೆ ಸ್ಪಂದಿಸುವುದು, ಸುದ್ದಿಗಳಿಗೆ ಪ್ರತಿಕ್ರಿಯಿಸುವುದು. ಕವನಗಳನ್ನೂ ಬರೆದು ಸಹೃದಯದ ಓದುಗರ ಜತೆ ಹಂಚಿಕೊಳ್ಳುವುದು ಮಾಡಬಹುದಿತ್ತು.

ಅಪ್ರಮೇಯ ರಾಧಾಕೃಷ್ಣ (ಬಲಬದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.