ADVERTISEMENT

ನೋಟ್ಸ್ ಆಯ್ಕೆಯನ್ನು ದೇಶದಲ್ಲಿ ಪರಿಶೀಲಿಸುತ್ತಿರುವ ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್ ದೇಶದಲ್ಲಿ ನೋಟ್ಸ್ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2022, 11:21 IST
Last Updated 30 ಸೆಪ್ಟೆಂಬರ್ 2022, 11:21 IST
   

ಬೆಂಗಳೂರು: ದೇಶದಲ್ಲಿ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಟ್ವಿಟರ್‌ನಲ್ಲಿ ಇರುವಂತೆಯೆ ಬಳಕೆದಾರರು ನೋಟ್ಸ್ ಹೆಸರಿನಲ್ಲಿ 60 ಅಕ್ಷರಗಳ ಮಿತಿಯಲ್ಲಿ ಅಪ್‌ಡೇಟ್ ಲಭ್ಯವಾಗಲಿದೆ.

ಇನ್‌ಸ್ಟಾಗ್ರಾಮ್ ಚಾಟ್ ಡಿಎಂ ಆಯ್ಕೆ ಇರುವಲ್ಲಿ ಬಳಕೆದಾರರು ಪೋಸ್ಟ್ ಮಾಡುವ ನೋಟ್ಸ್ ಕಾಣಿಸಿಕೊಳ್ಳುತ್ತದೆ. ನೋಟ್ಸ್ ಪೋಸ್ಟ್ ಮಾಡಿದ 24 ಗಂಟೆಗಳ ಬಳಿಕ ಅದು ಡಿಲೀಟ್ ಆಗಲಿದೆ.

ಸ್ಟೇಟಸ್ ಅಪ್‌ಡೇಟ್ ರೀತಿಯಲ್ಲಿ ನೋಟ್ಸ್ ಕಾರ್ಯನಿರ್ವಹಿಸಲಿದೆ. ಆದರೆ, ನೀವು ಪರಸ್ಪರ ಫಾಲೋವರ್ಸ್ ಆಗಿದ್ದರೆ ಮಾತ್ರ ನಿಮ್ಮ ನೋಟ್ಸ್ ಕಾಣಿಸಿಕೊಳ್ಳುತ್ತದೆ.

ADVERTISEMENT

ನೋಟ್ಸ್ ಪೋಸ್ಟ್ ಮಾಡಿದರೆ ಯಾವುದೇ ನೋಟಿಫಿಕೇಶನ್ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ, ಡಿಎಂ ಇರುವಲ್ಲಿ ಮಾತ್ರ ನಿಮ್ಮ ನೋಟ್ಸ್ ಕಾಣಸಿಗುತ್ತದೆ.

ಹೊಸ ಫೀಚರ್ ಪ್ರಸ್ತುತ ಪರಿಶೀಲನೆಯ ಹಂತದಲ್ಲಿದೆ. ಮುಂದೆ ಎಲ್ಲ ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.