ಪ್ರೀತಿ ಎನ್ನುವುದೊಂದು ಸುಂದರವಾದ ಭಾವನೆ. ನಾವು ಮತ್ತು ನೀವು ಪ್ರೀತಿಸುವವರೊಂದಿಗೆ ಸಮಯ ಕಳೆಯುವುದು, ದಿನವನ್ನು ಉತ್ತಮಗೊಳಿಸುವುದಾಗಿದೆ. ಇದನ್ನು ಚುಂಬನದ ಮೂಲಕ ವ್ಯಕ್ತಪಡಿಸುವುದು ಸುಲಭದಮಾರ್ಗ.
ಇಂದು (ಜುಲೈ 06) ಅಂತರರಾಷ್ಟ್ರೀಯ ಚುಂಬನ. ಈ ದಿನವು ತಾವು ಪ್ರೀತಿಸುವವರನ್ನು ಚುಂಬಿಸುವ ಮೂಲಕ ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುವುದಾಗಿದೆ.
ಅದು ಫ್ರೆಂಚ್ ಕಿಸ್ ಆಗಿರಲಿ ಅಥವಾ ಕೆನ್ನೆಗೆ ಔಪಚಾರಿಕವಾಗಿ ನೀಡುವ ಕಿಸ್ ಆಗಿರಲಿ, ಕೈಗಳಿಗೆ ನೀಡುವ ಆಕರ್ಷಕ ಕಿಸ್ ಆಗಿರಲಿ ಅಥವಾ ಕಣ್ಣೀರಿನ ವಿದಾಯದ ಕಿಸ್ ಆಗಿರಲಿ ಚುಂಬನವು ತುಂಬಾ ಹಳೆಯ ವಿಧಾನವಾಗಿದ್ದು, ಜನರು ಯಾವ ಸಂಬಂಧವನ್ನು ಹೊಂದಿದ್ದಾರೆ ಎಂಬುದರ ಆಧಾರದ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಚುಂಬನ ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕೋಟ್‌ಗಳು ಹರಿದಾಡುತ್ತಿವೆ. ಹಾಗೇ ಬಳಕೆದಾರರು ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗನ್ನು ಹೇಳುತ್ತಿದ್ದಾರೆ. ಕೆಲವು ಸಾಲುಗಳು ಹೀಗಿವೆ....
* ನಿನ್ನ ಚುಂಬನ ನನಗೆ ಸಂತೋಷ ಮತ್ತು ಆನಂದವನ್ನು ತುಂಬುತ್ತದೆ. ಪ್ರಿಯತಮೆ, ನಾವು ಎಂದಿಗೂ ಬೇರ್ಪಡದಿರಲಿ. ಹ್ಯಾಪಿ ಕಿಸ್ಸಿಂಗ್ ಡೇ!
* ನಮ್ಮ ಬಂಧವನ್ನು ಬಲಪಡಿಸಲು ನಿನಗೆ ಸಾಕಷ್ಟು ಸಿಹಿ ಮುತ್ತುಗಳನ್ನು ಕಳುಹಿಸುತ್ತಿದ್ದೇನೆ. ನಾವು ಎಂದೆಂದಿಗೂ ಹಾಗೆಯೇ ಇರುತ್ತೇವೆ ಮತ್ತು ನಮ್ಮ ಪ್ರೀತಿ ಬೆಳೆಯುತ್ತದೆ ಎಂದು ಆಶಿಸುತ್ತೇನೆ.
* ಭಾವನೆಗಳನ್ನು ವ್ಯಕ್ತಪಡಿಸಲುಪದಗಳು ವಿಫಲವಾದಾಗ, ನಿಮ್ಮ ಹೃದಯವು ಹೇಳಬೇಕಾದ ಎಲ್ಲವನ್ನೂ ‘ಚುಂಬನ‘ವೇ ಹೇಳುತ್ತದೆ. ಹ್ಯಾಪಿ ಕಿಸ್ಸಿಂಗ್ ಡೇ.
* ಸಂತೋಷ ಚುಂಬನಕ್ಕೆ ಸಮಾನವಾಗಿದೆ. ನೀವು ಅದನ್ನು ಆನಂದಿಸಲು ಬಯಸಿದರೆ ಚುಂಬನವನ್ನು ಹಂಚಿಕೊಳ್ಳಬೇಕು.
ಕೆಲವು ಟ್ವೀಟ್‌ಗಳು....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.