ADVERTISEMENT

ಸಾಮಾಜಿಕ ಮಾಧ್ಯಮದ ಸಿಬ್ಬಂದಿಯನ್ನು ಬೆದರಿಸಿಲ್ಲ: ಐಟಿ ಸಚಿವಾಲಯ

ಪಿಟಿಐ
Published 14 ಮಾರ್ಚ್ 2021, 14:20 IST
Last Updated 14 ಮಾರ್ಚ್ 2021, 14:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಾಮಾಜಿಕ ಮಾಧ್ಯಮ ತಾಣಗಳಾದ ಟ್ವಿಟರ್ ಮತ್ತಿತರ ಸಂಸ್ಥೆಗಳ ಯಾವುದೇ ಸಿಬ್ಬಂದಿಯನ್ನು ಬೆದರಿಸಿಲ್ಲ ಮತ್ತು ಜೈಲಿಗೆ ಅಟ್ಟುವ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.

ಫೇಸ್‌ಬುಕ್, ವಾಟ್ಸ್ ಆ್ಯಪ್ ಮತ್ತು ಟ್ವಿಟರ್‌ನ ಉದ್ಯೋಗಿಗಳನ್ನು ಸರ್ಕಾರ ಬೆದರಿಸಿದೆ ಮತ್ತು ಜೈಲಿಗೆ ಅಟ್ಟುವ ಕುರಿತು ಹೇಳಿದೆ ಎನ್ನಲಾದ ಸುದ್ದಿ ಹರಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವಾಲಯ, ದೇಶದ ಕಾನೂನು ಮತ್ತು ಸಂವಿಧಾನ ಪಾಲಿಸಿ, ಅದರ ಪ್ರಕಾರ ನಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆಯೇ ಹೊರತು, ಯಾವುದೇ ರೀತಿಯ ಬೆದರಿಕೆ ಒಡ್ಡಿಲ್ಲ ಎಂದು ತಿಳಿಸಿದೆ.

ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಬಳಕೆದಾರರು ಅವರ ಅಭಿಪ್ರಾಯ ವ್ಯಕ್ತಪಡಿಸಲು, ಪ್ರಧಾನಿ ಹಾಗೂ ಇತರ ಯಾವುದೇ ಸಚಿವರು, ಸರ್ಕಾರದ ನಿಯಮ ವಿರೋಧಿಸಲು, ಟೀಕಿಸಲು ಸಂವಿಧಾನ ಪ್ರಕಾರ ಅವಕಾಶವಿದೆ. ಆದರೆ ಟೀಕೆಯ ಹೆಸರಿನಲ್ಲಿ ಹಿಂಸೆ, ಉಗ್ರವಾದ, ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸುವುದು ಅಪರಾಧವಾಗಿದೆ ಎಂದು ಸಚಿವಾಲಯ ಹೇಳಿದೆ.

ADVERTISEMENT

ಕೇಂದ್ರ ಸರ್ಕಾರವು ಇತ್ತೀಚೆಗೆ ಟ್ವಿಟರ್‌ನಲ್ಲಿರುವ ನೂರಕ್ಕೂ ಅಧಿಕ ಪೋಸ್ಟ್‌ಗಳು, ಹ್ಯಾಶ್‌ಟ್ಯಾಗ್ ಮತ್ತು ಖಾತೆಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿತ್ತು. ಟ್ವಿಟರ್‌ ಅದಕ್ಕೆ ಪೂರ್ಣವಾಗಿ ಒಪ್ಪಿಲ್ಲವಾದರೂ, ನಂತರ ಸರ್ಕಾರ ನಿಯಮಾವಳಿ ಪ್ರದರ್ಶಿಸಿದಾಗ ಅದಕ್ಕೆ ಒಪ್ಪಿಕೊಂಡಿತ್ತು.

ಅದರ ಹೊರತಾಗಿ ಯಾವುದೇ ಸಂಸ್ಥೆಯ ಉದ್ಯೋಗಿಗಳನ್ನು ಬೆದರಿಸುವ ಕೆಲಸ ಮಾಡಿಲ್ಲ ಎಂದು ಐಟಿ ಸಚಿವಾಲಯ ಹೇಳಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.