ಪ್ರತಿದಿನ ನಾವು ಕೆಲಸಕ್ಕೆ ತೆರಳುತ್ತೇವೆ, ನಮ್ಮ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ, ಸುದ್ದಿಗಳನ್ನು ನೋಡುತ್ತೇವೆ ಮತ್ತು ಹೆಚ್ಚಿನ ಒತ್ತಡದಿಂದ ನಮ್ಮ ದಿನಗಳನ್ನು ಕಳೆಯುತ್ತೇವೆ. ಆದ್ದರಿಂದ, ನಾವು ಕೆಲವೊಮ್ಮೆ ಇದೆಲ್ಲದರಿಂದಲೂ ವಿರಾಮ ಪಡೆಯಬೇಕಾಗುತ್ತದೆ ಮತ್ತು ಪ್ರೀತಿಪಾತ್ರರ ಜೊತೆ ಕಳೆಯುವ ಸಮಯಕ್ಕಿಂತ ಉತ್ತಮವಾಗಿರಲು ಇನ್ನಾವುದು ಸಹಾಯ ಮಾಡುತ್ತದೆ?
ಪ್ರೀತಿ ಎನ್ನುವುದೊಂದು ಸುಂದರವಾದ ಭಾವನೆ ಮತ್ತು ನೀವು ಪ್ರೀತಿಸುವವರೊಂದಿಗೆ ಸಮಯ ಕಳೆಯುವುದು ನಿಮ್ಮ ದಿನವನ್ನು ಉತ್ತಮಗೊಳಿಸುವ ಖಚಿತ ಮಾರ್ಗವಾಗಿದೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ನೀವು ಅದನ್ನು ಹೇಗೆ ವ್ಯಕ್ತಪಡಿಸುತ್ತೀರಿ? ಪದಗಳು ಸಾಕಾಗುತ್ತವೆಯೇ?
ಅಂತರರಾಷ್ಟ್ರೀಯ ಚುಂಬನ ದಿನವು ತಾವು ಪ್ರೀತಿಸುವವರನ್ನು ಚುಂಬಿಸಲು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸುತ್ತದೆ ಮತ್ತು ಹೀಗಾಗಿ ಅವರ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಹೇಳುತ್ತದೆ.
ಅದು ಫ್ರೆಂಚ್ ಕಿಸ್ ಆಗಿರಲಿ ಅಥವಾ ಕೆನ್ನೆಗೆ ಔಪಚಾರಿಕವಾಗಿ ನೀಡುವ ಕಿಸ್ ಆಗಿರಲಿ, ಕೈಗಳಿಗೆ ನೀಡುವ ಆಕರ್ಷಕ ಕಿಸ್ ಆಗಿರಲಿ ಅಥವಾ ಕಣ್ಣೀರಿನ ವಿದಾಯದ ಕಿಸ್ ಆಗಿರಲಿ ಚುಂಬನವು ತುಂಬಾ ಹಳೆಯ ವಿಧಾನವಾಗಿದ್ದು, ಜನರು ಯಾವ ಸಂಬಂಧವನ್ನು ಹೊಂದಿದ್ದಾರೆ ಎಂಬುದರ ಆಧಾರದ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಸಾಂಕ್ರಾಮಿಕ ರೋಗದಿಂದಾಗಿ ಮಾಸ್ಕ್ ಧರಿಸುವುದು ಉತ್ತಮ ಅಭ್ಯಾಸವಾಗಿರುವುರಿಂದಾಗಿ ಈಗ ಚುಂಬನ ಮಾಡುವುದು ಉತ್ತಮ ಉಪಾಯವಲ್ಲ. ಆದರೆ ವರ್ಚುಯಲ್ ಆಗಿ ಅಂತರರಾಷ್ಟ್ರೀಯ ಚುಂಬನ ದಿನವನ್ನು ಆಚರಿಸುವುದನ್ನು ತಡೆಯಲು ಸಾಧ್ಯವಿಲ್ಲ.
ಅಂತರರಾಷ್ಟ್ರೀಯ ಚುಂಬನ ದಿನ 2021 ಅನ್ನು ಟ್ವಿಟರಾತಿಗಳು ಆನ್‌ಲೈನ್‌ನಲ್ಲಿ ಚುಂಬನಗಳನ್ನು ಮತ್ತು ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸದಾ ಇತರೆ ವಿಚಾರಗಳಿಂದ ಬಿಸಿಯಾಗಿರುವ ಟ್ವಿಟರ್ ಅನ್ನು ಶಾಂತ ಮತ್ತು ಸುಂದರವಾದ ಸ್ಥಳವನ್ನಾಗಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.