ADVERTISEMENT

ಜಿಯೋ ಗಾಟ್ ಟ್ಯಾಲೆಂಟ್: ಗೆದ್ದವರಿಗೆ ಥಾಯ್ಲೆಂಡ್‌ ಟಿಕೆಟ್‌, ಜಿಯೊ ರಿಚಾರ್ಜ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 10:00 IST
Last Updated 30 ಜನವರಿ 2020, 10:00 IST
ಜಿಯೊ ಗಾಟ್‌ ಟ್ಯಾಲೆಂಟ್‌
ಜಿಯೊ ಗಾಟ್‌ ಟ್ಯಾಲೆಂಟ್‌   

ಬೆಂಗಳೂರು:ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಡೇಟಾ ಕ್ರಾಂತಿಗೆ ಕಾರಣವಾದ ರಿಲಯನ್ಸ್‌ ಜಿಯೊ ಮತ್ತು ಸ್ನ್ಯಾಪ್‌ಚಾಟ್‌ ಜತೆಯಾಗಿ 10 ಸೆಕೆಂಡ್‌ಗಳ ಕ್ರಿಯೇಟಿವ್‌ ಚಾಲೆಂಜ್‌ ನಡೆಸುತ್ತಿವೆ. ಗೆಲುವು ಪಡೆಯುವವರಿಗೆ ಥಾಯ್ಲೆಂಡ್‌ ಪ್ರವಾಸ ಟಿಕೆಟ್ ಪಡೆಯಲಿದ್ದಾರೆ.

ಜಿಯೋ ಗಾಟ್ ಟ್ಯಾಲೆಂಟ್ ಹೆಸರನಲ್ಲಿ 10 ಸೆಕೆಂಡ್‌ ವಿಡಿಯೊ ಕ್ರಿಯೇಟಿವ್‌ ಚಾಲೆಂಜ್‌ ನಡೆಸಲಾಗುತ್ತಿದೆ. ಸ್ನ್ಯಾಪ್‌ಚಾಟ್‌ ಅಪ್ಲಿಕೇಷನ್‌ನ ತೆರೆದು ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಅಥವಾ ಜಿಯೊ ವೆಬ್‌ಸೈಟ್‌ನಲ್ಲಿ 'ಜಿಯೊ ಗಾಟ್‌ ಟ್ಯಾಲೆಂಟ್‌' ಪುಟಕ್ಕೆ ಭೇಟಿ ನೀಡುವ ಮೂಲಕ ಎಆರ್‌ ಲೆನ್ಸ್‌ ಅನ್‌ಲಾಕ್‌ ಮಾಡಬಹುದು. ಲೆನ್ಸ್‌ ತೆರೆದ ಮೇಲೆ 10 ಸೆಕೆಂಡ್‌ಗಳ ವಿಡಿಯೊ ರೆಕಾರ್ಡ್‌ ಮಾಡಿ ಸ್ನ್ಯಾಪ್‌ಚಾಟ್‌ ಐಡಿ ನಮೂದಿಸಿ ಮುಂದುವರಿಯಬೇಕು.

'ಅವರ್‌ ಸ್ಟೋರಿ'ಗೆ ಆಯ್ಕೆ ಮಾಡಿ ವಿಡಿಯೊ ಸಲ್ಲಿಕೆಯಾಗುತ್ತಿ‌ದ್ದಂತೆ ಟ್ಯಾಲೆಂಟ್‌ ಸ್ಪರ್ಧೆಯಲ್ಲಿ ಭಾಗಿಯಾಗುವಿರಿ. ಆಯ್ಕೆಯಾಗುವವರಿಗೆ ಗ್ರ್ಯಾಂಡ್‌ ಪ್ರೈಸ್‌ ಆಗಿ ಥಾಯ್ಲೆಂಡ್‌ ಪ್ರವಾಸಕ್ಕೆ 2 ಟಿಕೆಟ್ ಹಾಗೂ 100 ಮಂದಿ ವಿಜೇತರಿಗೆ ಜಿಯೊ ಕಡೆಯಿಂದ ಒಂದು ತಿಂಗಳ ರಿಚಾರ್ಜ್ ಸಿಗಲಿದೆ.ಫೆಬ್ರುವರಿ 4 ರವೆಗೂ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶವಿದೆ.

ADVERTISEMENT

ಜಿಯೋ ಮತ್ತು ಸ್ನ್ಯಾಪ್‌ಚಾಟ್ ಜತೆಯಾಗಿ ಹೊಸ ಮಾದರಿಯ ಸ್ನ್ಯಾಪ್‌ಚಾಟ್ ಲೆನ್ಸ್ ಅಭಿವೃದ್ಧಿ ಪಡಿಸಿದ್ದು, ಬಳಕೆದಾರರು ಮೈಕ್, ಟೋಪಿ, ಹೆಡ್‌ಫೋನ್ ಮತ್ತು ಲೈಟ್-ರಿಂಗ್‌ಗಳಂತಹ ವಿಭಿನ್ನ ಎಆರ್ ಪ್ರಾಪ್‌ಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.

ಸ್ನ್ಯಾಪ್‌ಚಾಟ್‌ನಲ್ಲಿ ಅವರ್ ಸ್ಟೋರಿಗೆ (Our Story) ಅಪ್‌ಲೋಡ್ ಮಾಡುವ ವಿಡಿಯೊಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.